ಗೋಣಿಕೊಪ್ಪ ವರದಿ, ಮಾ. 31: ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿಯಿಂದ ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜುವಿನಲ್ಲಿ ಮಹಿಳಾ ಮಾಸಾಚರಣೆ ಅಭಿಯಾನ ಕಾರ್ಯಕ್ರಮದಲ್ಲಿ ಮಹಿಳಾ ಕಾನೂನು ಮಾದಕ ವಸ್ತು ನಿರ್ಮೂಲನೆ ಬಗ್ಗೆ ಕಾರ್ಯಾಗಾರ ನಡೆಸಲಾಯಿತು.

ಹಿರಿಯ ಸಿವಿಲ್ ನ್ಯಾಯಾದೀಶೆ ನೂರುನ್ನಿಸ್ಸಾ ಅವರು ಮಹಿಳಾ ಕಾನೂನು ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಕಾನೂನು ಮಹಿಳೆಯರ ರಕ್ಷಣೆಗೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಇದರ ಪ್ರಯೋಜನವನ್ನು ಪಡೆಯುವಲ್ಲಿ ಮಹಿಳೆಯರು ವಿಫಲರಾಗುತ್ತಿದ್ದಾರೆ. ಮಹಿಳೆಯರ ರಕ್ಷಣೆಗೆ ರೂಪಿಸಿರುವ ಕಾನೂನು ಸದ್ಬಳಕೆ ಮಾಡಿಕೊಂಡು ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದರು. ಈ ಸಂದರ್ಭ ನಾಲ್ವರು ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಕೃಷಿ ಕ್ಷೇತ್ರದಲ್ಲಿ ಪುಟ್ಟಂಗಡ ರೋಹಿಣಿ ಸುಬ್ಬಯ್ಯ, ಕ್ರೀಡಾ ವಿಭಾಗದಲ್ಲಿ ಮಾರಮಾಡ ಮಾಚಮ್ಮ, ಶಿಕ್ಷಣ ವಿಭಾಗದಲ್ಲಿ ಮುಕ್ಕಾಟೀರ ಕಾವೇರಮ್ಮ ಹಾಗೂ ಉದ್ಯಮಿ ಜಯಂತಿ ಅವರುಗಳನ್ನು ಸನ್ಮಾನಿಸ ಲಾಯಿತು. ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಕೊಣಿಯಂಡ ಕಾವ್ಯ ಸಂಜು, ಕಾರ್ಯದರ್ಶಿ ಕೊಟ್ಟಂಗಡ ನಾಣಯ್ಯ, ಕಾಲೇಜು ಪ್ರಾಂಶುಪಾಲ ಡಾ. ಪಿ. ಸಿ. ಕವಿತಾ, ಜೆಸಿರೆಟ್ ಅಧ್ಯಕ್ಷೆ ಕಳ್ಳಿಚಂಡ ಸುಮಿ ರಾಬಿನ್, ಕಾರ್ಯಕ್ರಮ ಸಂಯೋಜಕ ಪುಟ್ಟಂಗಡ ಉತ್ತಪ್ಪ, ಪ್ರಮುಖರು ಗಳಾದ ಪುನೀತಾ, ಲೇಕಾ, ಜೂಲಿ, ಆಶಿತಾ, ಕವಿತ, ಪ್ರತಿಮಾ ಉಪಸ್ಥಿತರಿದ್ದರು.