ಗೋಣಿಕೊಪ್ಪ ವರದಿ, ಮಾ. 31: ಕೇರಳದ ತಿರುನೆಲ್ಲಿಯಲ್ಲಿ ನಕ್ಸಲರು ಕಾಣಿಸಿಕೊಂಡ ಬೆನ್ನಲ್ಲೆ, ಕೊಡಗಿನ ಇರ್ಪು ಭಾಗದಲ್ಲಿ ನಡೆಯುತ್ತಿರುವ ಕೂಂಬಿಂಗ್ ಕಾರ್ಯಾಚರಣೆಯನ್ನು ನಕ್ಸಲ್ ನಿಗ್ರಹ ದಳದ ಎಸ್.ಪಿ. ಅರುಣಾಂಕ್ಷಗಿರಿ ವೀಕ್ಷಿಸಿ ಸೂಕ್ತ ನಿರ್ದೇಶನ ನೀಡಿದರು.

ಕೊಡಗು-ಕೇರಳ ಗಡಿ ಭಾಗವಾದ ಬ್ರಹ್ಮಗಿರಿ ತಪ್ಪಿಲಿನ ಕುರ್ಚಿ ಹಾಗೂ ಕುಟ್ಟ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಭಾಗಗಳಲ್ಲಿ 5 ತಂಡಗಳು ಪ್ರತ್ಯೇಕವಾಗಿ ದಿನಂಪ್ರತಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ.