ಸೋಮವಾರಪೇಟೆ,ಮಾ.31: ಇಲ್ಲಿಗೆ ಸಮೀಪದ ಕೋವರ್ಕೊಲ್ಲಿ ಟಾಟಾ ಕಾಫಿ ಸಂಸ್ಥೆಯ ವನ ದುರ್ಗಾದೇವಿ ದೇವಾಲಯದ 45ನೇ ವಾರ್ಷಿಕ ಪೂಜೆ ಏ. 12ರಂದು ನಡೆಯಲಿದೆ. ಅಂದು ಬೆಳಿಗ್ಗೆ 5 ಗಂಟೆಯಿಂದ ಗಣಪತಿ ಹೋಮ, 7ಕ್ಕೆ ಪೂರ್ಣಾಹುತಿ, 9.30ಕ್ಕೆ ದುರ್ಗಾಹೋಮ, 11.30ಕ್ಕೆ ಪೂರ್ಣಾಹುತಿ, 12ಗಂಟೆಗೆ ಮಹಾಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.