ಶನಿವಾರಸಂತೆ, ಮಾ. 30: ಭಾರತ ದೇಶದ ಶಕ್ತಿ ಧರ್ಮ ಮತ್ತು ಆಧ್ಯಾತ್ಮಿಕತೆಯಾಗಿದ್ದು, ಇವು ಉಳಿಯದಿದ್ದರೆ ದೇಶ ಅಳಿವದು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಯಸಳೂರು ಹೋಬಳಿ ಹನಸೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಉತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಯೂ ಧಾರ್ಮಿಕ ತಳಹದಿಯಲ್ಲಿ ಸಾಗುತ್ತಿದೆ. ಆಧುನಿಕ ಶಿಕ್ಷಣದ ಪ್ರಗತಿಯಲ್ಲೂ ಯಶಸ್ಸು ಕಾಣುತ್ತಿದೆ. ವಿದ್ಯಾವಂತರು ಆಧ್ಯಾತಿಕ ಧಾರ್ಮಿಕ ಸಂಸ್ಕಾರದ ಚಿಂತನೆಯನ್ನು ಮಾಡಿದರೆ ಸಮಾಜದಲ್ಲಿ ಸುಸಂಸ್ಕøತರೆನಿಸಿಕೊಳ್ಳುತ್ತಾರೆ ಎಂದರು.ಮಣ್ಣಿನ ಗುಣವನ್ನು ಅವಲಂಭಿಸಿ ಬೆಳೆ ಬೆಳಯುವಂತೆ ದೇಶದ ಒಂದೊಂದು ಭಾಗವೂ ಅಲ್ಲಿನ ವಿಶೇಷತೆಯನ್ನು ಅವಲಂಭಿಸಿರುತ್ತದೆ. ದೇಶದ ಅಭಿವೃದ್ಧಿಯ ಹಿಂದೆ ಗುರು ಪರಂಪರೆ ಇರಲೇಬೇಕು ಧರ್ಮ ಮತ್ತು ಆಧ್ಯಾತ್ಮಿಕತೆ ಹುಟ್ಟಿನಿಂದಲೇ ಬರುವಂತದ್ದು ಎಂದು ಸ್ವಾಮೀಜಿ ಹೇಳಿದರು.ಹೈಕೋರ್ಟ್ ನ್ಯಾಯಧೀಶ ಎಚ್.ಪಿ. ಸಂದೇಶ್ ಮಾತನಾಡಿ, ಸಂಸ್ಕಾರ ಮತ್ತು ಆಧ್ಯಾತ್ಮಿಕತೆಯ ಚಿಂತನೆ ಇರುವವರು ನಿತ್ಯ ದೇವರ ದ್ಯಾನದೊಂದಿಗೆ ಬೆಳಕನ್ನು ಸ್ವಾಗತಿಸುತ್ತಾರೆ. ಕಷ್ಟ ಕಾಲದಲ್ಲಿ ಶಾಂತಿ, ನೆಮ್ಮದಿ ಸಿಗುವ ತಾಣ ದೇಗುಲ ಎಂದರು.
ಹಾಸನದ ಪ್ರೊ. ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಪ್ರಕೃತಿ ಸಮೃದ್ಧಿಯಾಗಿದ್ದಲ್ಲಿ ಪ್ರೀತಿ ತುಂಬಿದ ಹೃದಯವಿದ್ದಲ್ಲಿ ದೇವರು ನೆಲೆಸುತ್ತಾನೆ ಎಂದರಲ್ಲದೆ,
(ಮೊದಲ ಪುಟದಿಂದ) ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ಮೂಲಕ ನೈತಿಕ ಛಲ ಮೂಡಿಸಿ ಎಂದು ಕರೆ ನೀಡಿದರು. ದೇವಾಲಯ ಸ್ಥಳ ದಾನಿ ಗೀತಾ-ಧರ್ಮಪ್ಪ, ಭವಾನಿ-ಎಚ್.ಕೆ. ಗಣೇಶ್, ನ್ಯಾಯಧೀಶ ಎಚ್.ಪಿ. ಸಂದೇಶ್ ಉದ್ಯಮಿಗಳಾದ ಪ್ರತಾಪ್ ಗೌಡ, ನಾರ್ವೆ ಸೋಮಶೇಖರ್, ದೇವಸ್ಥಾನದ ಸಲಹೆಗಾರ ಕೆ.ಟಿ. ಕೃಷ್ಣೇಗೌಡ, ಎಚ್.ಟಿ. ನಾರಾಯಣಗೌಡ, ಹನಸೆ ಎಸ್ಟೇಟ್ ಮಾಲೀಕ ಮುತ್ತು ಚೆಟ್ಟಿಯಾರ್, ಸರೋಜಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ಟಿ. ಕೃಷ್ಣೇಗೌಡ, ಶಾಸಕ ಎಚ್.ಕೆ. ಕುಮಾರಸ್ವಾಮಿ, ನ್ಯಾಯಧೀಶ ಚಿನ್ನಪ್ಪ, ಪ್ರಾಂಶುಪಾಲ ಎಚ್.ಈ. ದಿವಾಕರ್, ಶಿಕ್ಷಕ ಕೆ.ಪಿ. ಜಯಕುಮಾರ್, ಮುಖಂಡರಾದ ಎಚ್.ಎಂ. ವಿಶ್ವನಾಥ್, ಆರ್.ಪಿ. ಲಕ್ಷ್ಮಣ್, ಕೆ.ಟಿ. ಕೃಷ್ಣೇಗೌಡ, ಉಜ್ಮರಿಜ್ವ, ಜರೀನಾ, ಎನ್.ಎಸ್. ಸಂದೀಪ್, ಎಚ್.ಎಸ್. ಅಪ್ಪಸ್ವಾಮಿ, ಎಚ್.ವಿ. ಗುರುಪ್ರಸಾದ್, ಎಚ್.ಪಿ. ಜೀವನ್, ಎಚ್.ಕೆ. ಸುರೇಶ್, ಸ್ವರೂಪಾ ಉಪಸ್ಥಿತರಿದ್ದರು.