*ಗೋಣಿಕೊಪ್ಪಲು, ಮಾ. 27: ಪಾನಮತ್ತ ದ್ವಿಚಕ್ರ, ನಾಲ್ಕು ಚಕ್ರ ವಾಹನ ಚಾಲಕರ ಅಮಲು ಇಳಿಸಲು ಗೋಣಿಕೊಪ್ಪಲು ಪೆÇಲೀಸರು ಹದ್ದಿನ ಕಣ್ಣಿಟ್ಟು ಸಿದ್ದರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಪೆÇಲೀಸರು ವಾಹನ ಚಾಲಕರ ತಪಾಸಣೆ ನಡೆಸಿ ಪಾನಮತ್ತ ಚಾಲಕರ ಮೇಲೆ ಶಿಸ್ತು ಕ್ರಮ ಕೈಗೊಂಡು ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಜನ ಚಾಗೃತಿ ಕಾರ್ಯಕ್ಕೆ ಪೆÇಲೀಸರು ಮುಂದಾಗಿದ್ದಾರೆ.

ಪಟ್ಟಣದ ಹಲವು ಮಾರ್ಗಗಳಲ್ಲಿ ತಪಾಸಣೆಗೆ ನಿರತರಾದ ಪೆÇಲೀಸರು ಕಳೆದ ಎರಡು ದಿನಗಳಲ್ಲಿ ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ತಪಾಸಣೆ ನಡೆಸಿ ಪಾನಮತ್ತ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಪೆÇಲೀಸರು ವಶಪಡಿಸಿಕೊಂಡ ವಾಹನಗಳನ್ನು ಚಾಲಕರು ನ್ಯಾಯಾಲ ಯದಲ್ಲಿ ದಂಡ ಕಟ್ಟಿ ಪಡೆದುಕೊಳ್ಳ ಬಹುದಾಗಿದೆ. ಹೀಗಾಗಿ ಪಾನಮತ್ತ ಚಾಲಕರ ಅಮಲು ಸರ್ರನೆ ಇಳಿಯುತ್ತಿದೆ.

ಪಟ್ಟಣದಲ್ಲಿ ಬಹಳಷ್ಟು ವಾಹನ ಚಾಲಕರು ಪಾನಮತ್ತರಾಗಿ ಅತೀ ವೇಗದಿಂದ ಚಾಲನೆ ಮಾಡುತ್ತಿದ್ದು, ಈ ಬಗ್ಗೆ ಪೆÇಲೀಸರಿಗೆ ಹಲವು ಬಾರಿ ಸಾರ್ವಜನಿಕರು ದೂರು ಸಲ್ಲಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೆÇಲೀಸರು ವಾಹನ ಚಾಲಕರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕ್ಕೆ ಮುಂದಾದರು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಮಾರ್ಗದರ್ಶನದಲ್ಲಿ ಗೋಣಿಕೊಪ್ಪಲು ಪೆÇಲೀಸ್ ಠಾಣೆ ಅಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಪೆÇಲೀಸರ ತಂಡ ಪ್ರತಿನಿತ್ಯ ವಾಹನ ತಪಾಸಣೆಗೆ ಮುಂದಾಗಿ ದ್ದಾರೆ. ಹೀಗಾಗಿ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೆ ಇರುವ ಚಾಲಕರ ಮೇಲೆ, ದಾಖಲಾತಿ, ಪರವಾನಗೆ ಇಲ್ಲz Àವರು, ಪಾನಮತ್ತರು ಹಾಗೂ ಕರ್ಕಶ ಶಬ್ಧ ಮಾಡುವ ವಾಹನ ಚಾಲಕರ ಮೇಲೆ ಪೆÇಲೀಸರು ಈಗ ಹದ್ದಿನ ಕಣ್ಣಿಟ್ಟು ಕ್ರಮ ಕೈಗೊಳ್ಳುತ್ತಿದ್ದಾರೆ.

ಚಿತ್ರ, ವರದಿ: ಎನ್.ಎನ್. ದಿನೇಶ್