ಸೋಮವಾರಪೇಟೆ, ಮಾ. 27: ಲೋಕಸಭಾ ಚುನಾವಣೆ ಹಿನ್ನೆಲೆ ತಾಲೂಕಿನ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಡಿವೈಎಸ್‍ಪಿ ದಿನಕರ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸೋಮವಾರಪೇಟೆ ತಾಲೂಕಿನ ಐಗೂರು, ಸೋಮವಾರಪೇಟೆ, ಹೊಸತೋಟ, ಮಾದಾಪುರ, ಸುಂಟಿಕೊಪ್ಪ, ಶನಿವಾರಸಂತೆ, ಬ್ಯಾಡಗೊಟ್ಟ, ಕೊಡ್ಲಿಪೇಟೆ ಸೇರಿದಂತೆ ಇತರೆಡೆಗಳಿಗೆ ತೆರಳಿ ಮತಗಟ್ಟೆಗಳನ್ನು ವೀಕ್ಷಿಸಿದರು.
ಐಗೂರು ಮತ್ತು ಸುಂಟಿಕೊಪ್ಪದಲ್ಲಿ ಸ್ಥಳೀಯ ರೊಂದಿಗೆ ಸಮಾಲೋಚನೆ ನಡೆಸಿ ಶಾಂತಿಯುತ ಮತದಾನಕ್ಕೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದರಲ್ಲದೇ, ಚುನಾವಣಾ ದಿನಾಂಕಗಳಂದು ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವದು ಎಂದರು.
ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್ ರಾಜ್, ಸಿಬ್ಬಂದಿ ಜಗದೀಶ್ ಅವರುಗಳು ಹಾಜರಿದ್ದರು.