ಮಡಿಕೇರಿ, ಮಾ. 27: ಶ್ರೀ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆ ಪೊನ್ನಂಪೇಟೆ ಹಾಗೂ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ತಜ್ಞ ವೈದ್ಯರುಗಳಿಂದ ಮಲ್ಟಿ ಸ್ಪೆಷಾಲಿಟಿ ಉಚಿತ ವೈದ್ಯಕೀಯ ಶಿಬಿರ ಶ್ರೀ ರಾಮಕೃಷ್ಣ ಸೇವಾಶ್ರಮದ ಆಸ್ಪತ್ರೆಯಲ್ಲಿ ತಾ. 28 ರಂದು (ಇಂದು) ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಶಿಬಿರದಲ್ಲಿ ಮೈಸೂರಿನ ನುರಿತ ವೈದ್ಯರು ಸಾಮಾನ್ಯ ವೈದ್ಯಕೀಯ ತಪಾಸಣೆ, ಹಲ್ಲು, ಚರ್ಮರೋಗ, ಮನೋರೋಗ, ಶಸ್ತ್ರ ಚಿಕಿತ್ಸಾ ತಪಾಸಣೆ, ಕಿವಿ, ಮೂಗು ಮತ್ತು ಗಂಟಲು, ಮಕ್ಕಳ ರೋಗ, ಸ್ತ್ರೀ ರೋಗ, ಮೂಳೆ ರೋಗ ಹಾಗೂ ಪ್ರಕೃತಿ ಚಿಕಿತ್ಸೆ ತಪಾಸಣೆ ನಡೆಯಲಿದೆ. ಪ್ರತಿ ಗುರುವಾರ ಸಂಜೆ 4 ರಿಂದ 6 ರವರೆಗೆ ಕೊಡಗಿನ ರೇಡಿಯಾಲಜಿಸ್ಟ್ ವೈದ್ಯ ಡಾ. ಶ್ಯಾಮ್ ಅಪ್ಪಣ್ಣ ಅವರಿಂದ ಚಿಕಿತ್ಸೆ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯವಿರುತ್ತದೆ ಎಂದು ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.