ಮಡಿಕೇರಿ, ಮಾ. 26: ತಾಕೇರಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನದ 5ನೇ ವರ್ಷದ ವಾರ್ಷಿಕ ಪೂಜೆಯನ್ನು ಗ್ರಾಮದ ಪ್ರಧಾನ ಅರ್ಚಕರಾದ ಗಣೇಶ್‍ಭಟ್ ಅವರ ನೇತೃತ್ವದಲ್ಲಿ ತಾ. 27 ಹಾಗೂ 28ರಂದು ನಡೆಯಲಿದೆ ಎಂದು ಶ್ರೀ ಈಶ್ವರ ದೇವರ ಗ್ರಾಮಾಭಿವೃದ್ಧಿ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.

ತಾ.27ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಗ್ರಾಮದ ಮೂಕ್ರಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ಗುಡಿಯ ಸ್ಥಳ ಶುದ್ಧೀಕರಣ ಪೂಜೆ ನೆರವೇರಲಿದೆ ಹಾಗೂ ಸಂಜೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. 28 ರಂದು ಬೆಳಿಗ್ಗೆ ಶುದ್ಧ ಪುಣ್ಯಾಹ ವಾಚನ, ಶ್ರೀ ಗಣಪತಿ ಪೂಜೆ, ಮಹಾ ಗಣಪತಿ ಹವನ, ಕಲಸ ಸಾನಿಧ್ಯ ಹೋಮ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ 12 ಗಂಟೆಗೆ ಶ್ರೀ ಸಬ್ಬಮ್ಮ ತಾಯಿ (ಸುಗ್ಗಿದೇವರ) ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಿಲಾಸ್ತಂಭದ ಸ್ಥಳ ಶುದ್ಧೀಕರಣ, ಶ್ರೀ ದುರ್ಗಾಹೋಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿದೆ. ಪೂಜೆಯ ನಂತರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಇರುತ್ತದೆ.