ಮಡಿಕೇರಿ, ಮಾ. 26 : ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರ ಗೆಲುವಿಗೆ ವಾಮಮಾರ್ಗ ಹಿಡಿಯುವ ಅಗತ್ಯ ನಮ್ಮ ಪಕ್ಷಕ್ಕಿಲ್ಲವೆಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ಅಭಿಮನ್ಯು ಕುಮಾರ್, ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನಪರವಾಗಿ ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿರುವ ದರಿಂದ ಬೇಸತ್ತು ಹೋಗಿರುವ ವಿರೋಧ ಪಕ್ಷಗಳು ‘ಟೀಕೆ’ಗೆ ವಿಷಯಗಳೇ ಇಲ್ಲದೆ ಕಪೆÀÇೀಲಕಲ್ಪಿತ ಆರೋಪಗಳನ್ನು ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಸಾಧನೆ ಮತ್ತು ಹಗರಣ ಮುಕ್ತ ಆಡಳಿತವನ್ನು ಮುಂದಿಟ್ಟುಕೊಂಡು ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆ ಯನ್ನು ಎದುರಿಸುತ್ತಿದೆ. ವಿರೋಧ ಪಕ್ಷಗಳು ಪ್ರಸ್ತುತ ಜನರು ನಂಬಲಾಗದ ರೀತಿಯ ವಿಚಾರಗಳನ್ನು ಮುಂದಿಟ್ಟು ಕೇಂದ್ರದ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿವೆ. ಬಿಜೆಪಿ ಮಂದಿ ವಾಮಮಾರ್ಗದ ಮೂಲಕÀ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎಂದು ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಪ್ರಮುಖರು, ಆರೋಪಿಸಿದ್ದಾರೆ. ಈ ವಾಮಮಾರ್ಗ, ಕುತಂತ್ರಗಳೆಲ್ಲವು ಟೀಕಿಸುತ್ತಿರುವವರ ಜನ್ಮಸಿದ್ಧ ಹಕ್ಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಚುನಾವಣೆಯ ಗೆಲುವಿಗಾಗಿ ಮತದಾರರ ಪಟ್ಟಿಯಿಂದ ಕಾಂಗ್ರೆಸ್ಸಿಗರ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಪ್ರಮುಖರು ಆರೋಪಿಸಿದ್ದಾರೆ. ಈ ರೀತಿ ಬಿಜೆಪಿ ನಡೆದು ಕೊಂಡಿರುವದಕ್ಕೆ ಒಂದು ಉದಾಹರಣೆಯನ್ನು ಕಾಂಗ್ರೆಸ್ ತೋರಿಸಲಿ ಎಂದು ಸವಾಲೊಡ್ಡಿದ ಅಭಿಮನ್ಯು ಕುಮಾರ್, ಕಲಬೆರಕೆ ಸರಕಾರದಲ್ಲಿ ಇರುವ ಅಧಿಕಾರಿಗಳು ಸರ್ಕಾರದ ಭಾಗವಾಗಿರುವವರ ಮಾತಿಗೆ ಬೆಲೆ ಕೊಟ್ಟು ಆ ರೀತಿ ಮಾಡಿ ರಬಹುದು. ಅಲ್ಲದೆ ಜಿಲ್ಲೆಯಲ್ಲಿರುವ ನುಸುಳುಕೋರ ಬಾಂಗ್ಲಾದೇಶಿಗರು, ಅಸ್ಸಾಮಿಗರನ್ನು ಮತಪಟ್ಟಿಗೆ ಸೇರಿಸುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ ಎಂದು ಅವರು ಆರೋಪಿಸಿದರು.

ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭ ಸ್ವತಃ ಸಂಕಷ್ಟಕ್ಕೆ ಸಿಲುಕಿದ್ದ ಕಾಂಗ್ರೆಸ್ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರನ್ನು ಹೊರತುಪಡಿಸಿದರೆ ಇತರೆ ಯಾವದೇ ಕಾಂಗ್ರೆಸ್ ಮಂದಿಯೂ ಕಾಣಿಸಿ ಕೊಂಡಿರಲಿಲ್ಲ. ಜಿಲ್ಲೆಯ ಶಾಸಕರೊಂದಿಗೆ ಸಂಸದರು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿರುವದಲ್ಲದೆ, ಕೇಂದ್ರದ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಜಿಲ್ಲೆಗೆ ಕರೆಸುವಲ್ಲಿ ಮತ್ತು ನೆರವನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಭಿಮನ್ಯುಕುಮಾರ್ ಹೇಳಿದರು.

ಜಿಲ್ಲಾ ಬಿಜೆಪಿ ವಕ್ತಾರÀ ಸುಬ್ರಹ್ಮಣ್ಯ ಉಪಾಧ್ಯಾಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಪಂಡ ರವಿ ಕಾಳಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅರುಣ್ ಕುಮಾರ್ ಹಾಗೂ ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.