ಮಡಿಕೇರಿ, ಮಾ. 26: ಕೊಡಗು ಜಿಲ್ಲಾ ಮುಸ್ಲಿಂ ಸ್ಪೋಟ್ರ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ 11 ನೇ ವರ್ಷದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ವಾಲಿಬಾಲ್ ಪಂದ್ಯಾಟ ಏ. 23 ರಿಂದ 25 ರವರೆಗೆ ವೀರಾಜಪೇಟೆ ತಾಲೂಕು ಮೈದಾನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಅಧ್ಯಕ್ಷÀ ಪಿ.ಎ. ಹನೀಫ್, ಏ. 23 ರಂದು ಅಪರಾಹ್ನ 3 ಗಂಟೆಗೆ ಪಂದ್ಯಾಟಕ್ಕೆ ಚಾಲನೆ ದೊರಕಲಿದ್ದು, ತಾ. 25 ರಂದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪಂದ್ಯಾಟದ ವಿಜೇತ ತಂಡಗಳಿಗೆ ಪ್ರಥಮ ರೂ. 55,555 ನಗದು ಹಾಗೂ ಟ್ರೋಫಿ, ದ್ವೀತಿಯ ಪಡೆದ ತಂಡಕ್ಕೆ ರೂ. 22,222 ನಗದು ಹಾಗೂ ಟ್ರೋಫಿ, ತೃತೀಯ ಪಡೆದ ತಂಡಕ್ಕೆ ರೂ. 11,111 ನಗದು ಹಾಗೂ ಟ್ರೋಫಿ ಮತ್ತು ಚತುರ್ಥ ಪಡೆದ ತಂಡಕ್ಕೆ ರೂ. 5,555 ನಗದು ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಗುವದೆಂದರು.

2009 ರಲ್ಲಿ ಪ್ರಾರಂಭವಾದ ಮುಸ್ಲಿಂಕಪ್ ವಾಲಿಬಾಲ್ ಪಂದ್ಯಾವಳಿಯೂ 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 11ನೇ ವರ್ಷದ ಪಂದ್ಯಾಟಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಕಳೆದ ವರ್ಷದಲ್ಲಿ 52 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಗುಂಡಿಕೆರೆ ತಂಡ ಪ್ರಥಮ ಹಾಗೂ ಎಡಪಾಲ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಈ ಬಾರಿ 65 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ ತಮ್ಮ ತಂಡದ ಹೆಸರುಗಳನ್ನು ನೋಂದಾಯಿ ಕೊಂಡಿದೆ. ಪ್ರತಿ ಊರಿನಿಂದ ಆಯಾ ಊರಿನ ಒಂದು ತಂಡಗಳು ಭಾಗವಹಿಸಲು ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಆಯಾ ಊರಿನ ತಂಡದಲ್ಲಿ ಆಯಾ ಊರಿನ ಕ್ರೀಡಾಪಟುಗಳು ಭಾಗವಹಿಸ ಬಹುದು.

ಸದರಿ ಸಂಸ್ಥೆ ವತಿಯಿಂದ ಗ್ರಾಮೀಣ ಮಟ್ಟದ ಕ್ರೀಡಾ ಪಟುಗಳನ್ನು ಗುರುತಿಸಿ, ಅವರ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮವಾದ ವೇದಿಕೆಯನ್ನು ನಮ್ಮ ಸಂಸ್ಥೆಯು ಒದಗಿಸುತ್ತಾ ಬಂದಿದೆ ಎಂದರು.

ಜಿಲ್ಲೆಯ ಗ್ರಾಮೀಣ ಪ್ರದೇಶದ ಮುಸ್ಲಿಂ ಯುವಕರು ವಾಲಿಬಾಲ್‍ನ್ನು ತಮ್ಮ ನೆಚ್ಚಿನ ಕ್ರೀಡೆಯಾಗಿ ಗುರುತಿಸಿ ಕೊಂಡಿರುವದರಿಂದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳ ಕ್ರೀಡಾ ಕೌಶಲ್ಯವನ್ನು ಅನಾವರಣಗೊಳಿಸುವ ಉತ್ತಮ ವೇದಿಕೆಯಾಗಿದೆ ಎಂದು ಹನೀಫ್ ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ 94485 85731, 99456 35158, 9449989018 ಸಂಪರ್ಕಿಸ ಬಹುದಾಗಿದೆ.

ಗೋಷ್ಠಿಯಲ್ಲಿ ಅಸೋಸಿ ಯೇಷನ್‍ನ ಕಾರ್ಯಾಧ್ಯಕ್ಷದ ಪಿ.ಎ. ಕರೀಂ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್, ಉಪಾಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಖಜಾಂಚಿ ಹೆಚ್.ಎ. ಹಂಸ, ನಿರ್ದೇಶಕÀ ಎಂ.ಎ. ಮನ್ಸೂರ್ ಅಲಿ ಹಾಗೂ ಕೆ.ಎಂ. ರಫೀಕ್ ಉಪಸ್ಥಿತರಿದ್ದರು.