ಮಡಿಕೇರಿ, ಮಾ. 25: ನಗರದ ರಾಜಾಸೀಟ್ ಬಳಿ ವಾಹನಗಳ ದಟ್ಟಣೆಯೊಂದಿಗೆ, ಬಸ್ ಸಂಚಾರಕ್ಕೆ ತೊಂದರೆ ನಿವಾರಿಸುವ ದಿಸೆಯಲ್ಲಿ ನಗರಸಭೆಯಿಂದ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ ಬಳಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗುತ್ತಿದೆ.ಅಲ್ಲಿನ ರಸ್ತೆ ತಿರುವಿನಲ್ಲಿ ವಾರ್ತಾಭವನದತ್ತ ಸಾಗುವ ಮಾರ್ಗದ, ಕೆಳಗಿನ ರಸ್ತೆಗೆ ಹೊಂದಿಕೊಂಡಂತೆ ಸುಮಾರು 10 ಮೀಟರ್ ಅಂತರದಲ್ಲಿ ಪಾರ್ಕಿಂಗ್ ನೊಂದಿಗೆ ವಾಹನಗಳ ನಿಲುಗಡೆಗೆ ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ ನಗರಸಭಾ ಆಯುಕ್ತ ಎಂ.ಎಲ್. ರಮೇಶ್, ಸಾರಿಗೆ ಪ್ರಾಧಿಕಾರ ಅಧಿಕಾರಿ ಶಿವಣ್ಣ, ನಗರ ಪೊಲೀಸ್ ವೃತ್ತ ನಿರೀಕ್ಷಕ ನಾಗೇಗೌಡ ಹಾಗೂ ನಿರ್ಮಿತಿ ಕೇಂದ್ರದ ಇಂಜಿನಿಯರ್ ರೋಷನ್, ಸಿಬ್ಬಂದಿ ಹರೀಶ್ ಅವರುಗಳು ಖುದ್ದು ಪರಿಶೀಲನೆ ನಡೆಸಿದರು. ಅಲ್ಲದೆ ರೂ. 3 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ರೀತಿ ವಾಹನಗಳ ನಿಲುಗಡೆಗೆ ಕ್ರಮ ವಹಿಸಲು ಚರ್ಚಿಸಿದರು.ಚಿತ್ರ, ವರದಿ : ಟಿ.ಜಿ. ಸತೀಶ್