ಶ್ರೀಮಂಗಲ, ಮಾ. 25: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಪೊರಾಡು ದವಸ ಭಂಡಾರದ 63ನೇ ವಾರ್ಷಿಕ ಮಹಾಸಭೆ ನಡೆಯಿತು.
ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಿದೇರಿರ ಬಿ. ವಿಜಯ ಅವರು, ಸಂಘದಲ್ಲಿ ಭತ್ತದ ವಹಿವಾಟು ಸಂಪೂರ್ಣ ನಿಂತಿದೆ. ಭತ್ತ ವ್ಯವಸಾಯ ಬಹುತೇಕ ಕಡಿಮೆಯಾಗಿರುವದರಿಂದ ಭತ್ತದ ಬದಲಿಗೆ ನಗದು ರೂಪದಲ್ಲಿ ವ್ಯವಹಾರ ನಡೆಸಲಾಗುತ್ತಿದೆ ಎಂದರು. ದವಸ ಭಂಡಾರದಿಂದ ಬಹಳ ಜನರಿಗೆ ಪ್ರಯೋಜನವಾಗಿದೆ. ಮುಂದಿನ ದಿನಗಳಲ್ಲಿಯೂ ಈ ಸಂಘವನ್ನು ಎಲ್ಲರ ಸಹಕಾರದೊಂದಿಗೆ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿ ರುವದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭ ಸದಸ್ಯರ ಮನವಿ ಮೇರೆಗೆ ರೂ. 5.8 ಲಕ್ಷ ಹಣವನ್ನು ಸಾಲ ನೀಡಲಾಯಿತು. ಸಂಘದ ಕಾರ್ಯದರ್ಶಿ ಬಲ್ಯಮಿದೇರಿರ ಮೋಹನ್ಕುಮಾರ್ ಅವರು ಲೆಕ್ಕಪತ್ರ ಹಾಗೂ ವಾರ್ಷಿಕ ವರದಿ ಮಂಡಿಸಿ ದರು. ಸಂಘದ ನಿರ್ದೇಶಕರುಗಳಾದ ಅಣ್ಣೀರ ಕೆ. ಪೊನ್ನಪ್ಪ, ಅಣ್ಣೀರ ಮಹೇಂದ್ರ, ಮಲ್ಲೇಂಗಡ ಸುಬ್ರಮಣಿ ಮತ್ತು ಹಿರಿಯ ಸದಸ್ಯರು ಹಾಜರಿದ್ದರು.