ಭಾಗಮಂಡಲ, ಮಾ. 25: ಇಲ್ಲಿನ ಜೇನು ಕೃಷಿಕರ ತರಬೇತಿ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ ನಡೆಯಿತು. ಭಗಂಡೇಶ್ವರ ರೈತ ಉತ್ಪಾದಕರ ಸಂಘದ ಸದಸ್ಯರಿಗೆ ತಾಲೂಕು ಪಂಚಾಯಿತಿ ಯೋಜನೆಯಡಿ ತರಬೇತಿ ನೀಡಲಾಗಿದ್ದು 70 ಮಂದಿ ರೈತ ಮಹಿಳೆಯರು ಅಣಬೆ ಬೇಸಾಯದ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು.
ಅಣಬೆ ಬೇಸಾಯದಲ್ಲಿ ತರಬೇತಿ ಪಡೆದವರಿಗೆ ಅರ್ಧ ಕೆ.ಜಿ. ಅಣಬೆ ಬೀಜಗಳನ್ನು ವಿತರಿಸಲಾಯಿತು. ಸಹಾಯಕ ತೋಟಗಾರಿಕಾ ಇಲಾಖಾಧಿಕಾರಿ ಬಿ.ಡಿ. ವಸಂತ ತರಬೇತಿ ನೀಡಿದರು.