ಕುಶಾಲನಗರ, ಮಾ. 25: ಲೋಕಸಭಾ ಚುನಾವಣೆ ಹಿನ್ನೆಲೆ ಕುಶಾಲನಗರ ಸಮೀಪದ ಬೈಲಕೊಪ್ಪ ಪೊಲೀಸ್ ಠಾಣೆಯಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದಂತೆ ಎಚ್ಚರಿಕೆ ನೀಡಲಾಯಿತು.
ಪಿರಿಯಾಪಟ್ಟಣ ವೃತ್ತ ನಿರೀಕ್ಷಕ ರಮೇಶ್ ಮತ್ತು ಬೈಲ್ಕೊಪ್ಪ ಪೊಲೀಸ್ ಠಾಣಾಧಿಕಾರಿ ಸವಿ ಅವರು ಠಾಣೆ ವ್ಯಾಪ್ತಿಯ ರೌಡಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಕೊಪ್ಪ, ಬೈಲ್ಕೊಪ್ಪ ಸುತ್ತಮುತ್ತ ವ್ಯಾಪ್ತಿಯ ಒಟ್ಟು 41 ಮಂದಿ ರೌಡಿಗಳು ಠಾಣೆಗೆ ಹಾಜರಾಗಿರುವದಾಗಿ ಠಾಣಾಧಿಕಾರಿ ಸವಿ ಮಾಹಿತಿ ನೀಡಿದ್ದಾರೆ.