ಸುಂಟಿಕೊಪ್ಪ, ಮಾ. 25: ರಾಷ್ಟ್ರೀಯ ಹೆದ್ದಾರಿಯ ಶಂಕರ್ ಕ್ಲಿನಿಕ್ ಸಮೀಪ ಕಾರೊಂದು ಮೂರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವಾಹನಗಳು ಜಖಂಗೊಂಡು ವ್ಯಕ್ತಿಯೊಬ್ಬರು ಗಾಯ ಗೊಂಡ ಘಟನೆ ಶನಿವಾರ ನಡೆದಿದೆ.

ಗದ್ದೆಹಳ್ಳದಿಂದ ಸುಂಟಿಕೊಪ್ಪ ಕಡೆಗೆ ಜೀವಿತ್ ಎಂಬ ಯುವಕ ಪಂಪ್‍ಹೌಸ್ ನಿವಾಸಿ ತನ್ನ (ಎಂಹೆಚ್ 04-ಬಿಕೆ3265) ಎಸ್ಟೀಮ್ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭ ನಿಯಂತ್ರಣ ಕಳೆದುಕೊಂಡು ಬೈಕು ಕಾರು, ಹಾಗೂ ಆಟೋ ರಿಕ್ಷಾಕ್ಕೆ ಸರಣಿ ಡಿಕ್ಕಿ ಹೊಡೆದಿದೆ.

ಇದರಿಂದ ಮೂರು ವಾಹನಗಳು ಜಖಂಗೊಂಡು ಬೈಕ್ ಸವಾರ ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸುಂಟಿಕೊಪ್ಪ ಪೊಲೀಸರು ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.