ಮಡಿಕೇರಿ, ಮಾ. 24: ನಗರದ ಧಾರ್ಮಿಕ್ ಯೂತ್ ಕ್ರಿಕೆಟ್ ಕ್ಲಬ್ ವತಿಯಿಂದ ಕ್ಲಬ್‍ನ ಸ್ಥಾಪಕಾಧ್ಯಕ್ಷ ದಿ. ಸುದರ್ಶನ್ ಜ್ಞಾಪಕಾರ್ಥ ಸುದರ್ಶನ್ ಮೆಮೋರಿಯಲ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ಜ. ತಿಮ್ಮಯ್ಯ ಮೈದಾನದಲ್ಲಿ ತಾ. 25 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ. ಏ. 4ರಂದು ಫೈನಲ್ ಪಂದ್ಯಾಟ ನಡೆಯಲಿದೆ.