ಸೋಮವಾರಪೇಟೆ, ಮಾ. 23: ಇಲ್ಲಿನ ಪುಷ್ಪಗಿರಿ ಜೇಸಿಐ ಮಹಿಳಾ ಘಟಕದ ವತಿಯಿಂದ ಸಮೀಪದ ಬೇಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.

ಘಟಕದ ಅಧ್ಯಕ್ಷೆ ಸುಮಲತಾ ಪುರುಷೋತ್ತಮ್ ಮಾತನಾಡಿ, ಭೂಮಿಯಲ್ಲಿ ಶೇ. 70 ರಷ್ಟು ಜಲ ಇದ್ದರೂ, ಇಂದಿಗೂ 1.5 ಬಿಲಿಯನ್ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಇದರಿಂದಾಗಿ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತಿದ್ದು ಅಪಾರ ತೊಂದರೆ ಆಗುತ್ತಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎ. ಯೋಗೇಶ್ ಮಾತನಾಡಿ, ನೀರನ್ನು ಸಂರಕ್ಷಿಸದಿದ್ದರೆ ಮುಂದಿನ ಜನಾಂಗ ಉಳಿಯುವದಿಲ್ಲ ಎಂದರು. ಶಾಲಾ ಮಕ್ಕಳಿಗೆ ನೀರಿನ ಮಹತ್ವದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವೇದಿಕೆಯಲ್ಲಿ ಜೇಸೀ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಪುರುಷೋತ್ತಮ್, ಜೇಸೀ ವಲಯ ಅಧಿಕಾರಿ ಮಾಯಾ ಗಿರೀಶ್, ಗಾ.್ರಪಂ. ಮಾಜಿ ಅಧ್ಯಕ್ಷ ಬಿ.ಎಸ್. ಬಸವರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆನ್ನಕೇಶವ, ಜೇಸಿ ರೇಟ್ಸ್ ಕಾರ್ಯದರ್ಶಿ ವಿದ್ಯಾ ಸೋಮೇಶ್ ಉಪಸ್ಥಿತರಿದ್ದರು.