ಚೆಟ್ಟಳ್ಳಿ, ಮಾ. 23: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ಎಸ್ಎಫ್) ನಡೆಸಿದ ಕಾನ್ಫಿಡೆನ್ಸ್ ಟೆಸ್ಟ್ ಪರೀಕ್ಷೆಯು ಯಶಸ್ವಿಯಾಗಿ ಜನವರಿ ತಿಂಗಳಲ್ಲಿ ಜಿಲ್ಲೆಯಾದ್ಯಂತ ನಡೆದಿದೆ. ಪರೀಕ್ಷೆಗೆ ಸಹಕರಿಸಿದ ಚೆಟ್ಟಳ್ಳಿ ಪ್ರೌಢಶಾಲೆಗೆ ಎಸ್.ಎಸ್.ಎಫ್. ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಿದ್ದಾಪುರ ಸೆಕ್ಟರ್ ಕಾರ್ಯದರ್ಶಿ ನಿಜಾಮುದ್ದೀನ್, ವೀರಾಜಪೇಟೆ ಡಿವಿಜನ್ ಉಪಾಧ್ಯಕ್ಷ ಜಲಾಲ್ ಅಮಾನಿ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮುಹಮ್ಮದ್ ರಫಿ, 40 ಏಕರೆ ಉಪಾಧ್ಯಕ್ಷ ಸುಲಯ್ಯಮಾನ್ ಸಹದಿ, ಸಜೀರ್ ಉಪಸ್ಥಿತರಿದ್ದರು.