ಮಡಿಕೇರಿ, ಮಾ. 23: ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ವಿವಿಧ ಕಡೆ ದಾಳಿ ನಡೆಸಿದ್ದು, ವೀರಾಜಪೇಟೆ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕರು ಚೆಂಬೆಬೆಳ್ಳೂರು ಗ್ರಾಮದ ವ್ಯಾಪ್ತಿಯಲ್ಲಿ ಗಸ್ತು ಸಂದರ್ಭದಲ್ಲಿ 10.080 ಲೀ ಮದ್ಯವನ್ನು ವಶಪಡಿಸಿಕೊಂಡು ಒಂದು ಗಂಭೀರ ಪ್ರಕರಣ ದಾಖಲು ಮಾಡಿರುತ್ತಾರೆ. ಈ ದಿನದಂದು ಒಟ್ಟು 16.480 ಲೀ ಮದ್ಯವನ್ನು ವಶಪಡಿಸಿಕೊಂಡು 12 ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿರುತ್ತದೆ. 1 ಗಂಭೀರ ಹಾಗೂ 13 ಇತರೆ ಪ್ರಕರಣಗಳು ದಾಖಲಾಗಿರುತ್ತದೆ. ವಶಪಡಿಸಿಕೊಂಡ ಮದ್ಯದ ಅಂದಾಜು ಮೊತ್ತ ರೂ.5,220 ಗಳಾಗಿರುತ್ತದೆ.