ಮಡಿಕೇರಿ, ಮಾ. 21: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ರಜತ ಮಹೋತ್ಸವದ ಸವಿನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಬ್ರಾಹ್ಮಣ ಸಮುದಾಯದವರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ವೇದ, ಉಪನಿಷತ್ತು, ಭಾಗವತ್, ರಾಮಾಯಣ, ಮಹಾಭಾರತ, ಪುರಾಣ, ಪುಣ್ಯಕಥೆ, ಧಾರ್ಮಿಕತೆ, ಬ್ರಾಹ್ಮಣತ್ವ ಮತ್ತು ಸಂಘದ ಬಗ್ಗೆ ಲೇಖನಗಳನ್ನು ಬರೆಯಬಹುದು.
ವಾಣಿಜ್ಯ ಪ್ರಕಟಣೆ, ವ್ಯಾಪಾರೋದ್ಯಮ ಮತ್ತು ಇತರ ವಿಷಯಗಳಿಗಾಗಿ ಜಾಹೀರಾತುಗಳನ್ನು ಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ 9449761296 ಸಂಖ್ಯೆಯನ್ನು ಸಂಪರ್ಕಿಸಬಹುದು.
ವಿಳಾಸ : ಗೌರವ ಕಾರ್ಯದರ್ಶಿಗಳು (ಸದಾನಂದ ಪುರೋಹಿತ್), ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘ, ಕೈಕೇರಿ, ಗೋಣಿಕೊಪ್ಪಲು - 571213, ವೀರಾಜಪೇಟೆ ತಾಲೂಕು.