ಸುಂಟಿಕೊಪ್ಪ, ಮಾ. 22: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿಗೆ ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಸಿಂಥೆಟಿಕ್ ಬೋರ್ಡ್ (ಕೃತಕ ಬರೆಯುವ ಫಲಕವನ್ನು ಕುಶಾಲನಗರ ರೋಟರಿ ಕ್ಲಬ್‍ನ ಅಧ್ಯಕ್ಷ ಜೇಕಬ್ ಉದಾರವಾಗಿ ದಾನ ನೀಡಿದರು. ಈ ಸಂದರ್ಭ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಜೇಕಬ್ ಅವರನ್ನು ಸನ್ಮಾನಿಸಿದರು. ಕುಶಾಲನಗರ ರೋಟರಿ ಕ್ಲಬ್‍ನ ಕಾರ್ಯದರ್ಶಿ ಪ್ರೇಮ್‍ಚಂದ್ರ, ಸದಸ್ಯರಾದ ಮಹಾಲಿಂಗ ಕಾಲೇಜಿನ ಆಡಳಿ ಮಂಡಳಿ ಅಧ್ಯಕ್ಷರಾದ ವೈ.ಎಂ. ಕರುಂಬಯ್ಯ, ಕಾರ್ಯದರ್ಶಿ ರಮೇಶ್ ಪಿಳ್ಳೆ, ಸದಸ್ಯರಾದ ಸಿ.ಎಸ್. ಸತ್ಯಕುಮಾರ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.