ಮಡಿಕೇರಿ, ಮಾ. 22: ಮಹಿಳಾ ದಿನಾಚರಣೆಯನ್ನು ನೇತಾಜಿ ಯುವಕ ಮಂಡಲ ಸಭಾಂಗಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಒಡಿಪಿ ಸಂಸ್ಥೆಯ ಸಂಯೋಜಕ ಜಾಯಿಸ್ ಮೆನೇಜಸ್ ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಯುಕ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ವಹಿಸಿದ್ದರು. ನೇತಾಜಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಪಿ.ವಿ. ಆನಂದ್ ಕುಮಾರ್ ಪಾಲ್ಗೊಂಡಿದ್ದರು.

ಮಹಿಳೆಯರಿಗೆ ಹಲವು ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಹಿಳೆಯರು ಬಹುಸಂಖ್ಯೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದು ಕೊಂಡರು. ಈ ಕಾರ್ಯಕ್ರಮದ ನಿರೂಪಣೆ ಪದ್ಮಾರವಿ, ಸ್ವಾಗತ ವಿ.ಆರ್. ನೇತ್ರಾವತಿ, ವಂದನಾ ರ್ಪಣೆ ಸರೋಜ ರೈ ನೆರವೇರಿಸಿದರು. ಮಂಡಳಿಯ ಅಧ್ಯಕ್ಷ ಮಂಜುಳ ಆನಂದ್ ಉಪಸ್ಥಿತರಿದ್ದರು.