ಮಡಿಕೇರಿ, ಮಾ. 21: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿರುವ ವಿದೇಶಿ ಆಟಗಾರರೂ ಸೇರಿದಂತೆ ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾಟ ಪ್ರಸಕ್ತ ಸಾಲಿನಲ್ಲಿ ತಾ. 23 ರಿಂದ ಆರಂಭಗೊಳ್ಳಲಿದೆ.
ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವ ಈ ಚುಟುಕು ಕ್ರಿಕೆಟ್ನಲ್ಲಿ ಕೊಡಗಿನವರೂ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರಸಕ್ತ ವರ್ಷದ ಪಂದ್ಯಾವಳಿಯಲ್ಲಿ ಇಬ್ಬರು ಆಟಗಾರರು ಹಾಗೂ ಓರ್ವ ಫಿಜಿಯೋ ಥೆರಪಿಸ್ಟ್ ಐಪಿಎಲ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಅಂತರ್ರಾಷ್ಟ್ರೀಯ ಕ್ರಿಕೆಟಿಗ ಅಯ್ಯುಡ ರಾಬಿನ್ ಉತ್ತಪ್ಪ ಹಾಗೂ ಕಂಡಂಗಾಲದವರಾದ ಕೊಂಗಾಂಡ ಸಿ. ಕಾರ್ಯಪ್ಪ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಆಡಲಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಫಿಜಿಯೋ ಆಗಿ ಮಕ್ಕಂದೂರಿನ ಡಾ. ಕುಂಬುಗೌಡನ ಆರ್. ಶ್ರವಣ್ ತಂಡದೊಟ್ಟಿಗಿದ್ದಾರೆ.