ಗೋಣಿಕೊಪ್ಪ ವರದಿ, ಮಾ. 22 : ಪೊನ್ನಂಪೇಟೆ ಶ್ರೀಮುತ್ತಪ್ಪ ಪುರುಷರ ಸ್ವಸಹಾಯ ಸಂಘದ ವತಿಯಿಂದ ಸೇನೆಯಲ್ಲಿ ಶೌರ್ಯಚಕ್ರ ಪಡೆದ ಯೋಧ ಹೆಚ್. ಎನ್. ಮಹೇಶ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಹೇಶ್, ಜಿಲ್ಲೆಯಿಂದ ಹೆಚ್ಚು ಯುವಕರು ಸೇನೆಗೆ ಸೇರುವಂತಾಗಬೇಕು. ದೇಶಸೇವೆಗೆ ಉತ್ತಮ ಅವಕಾಶ ದೊರೆಯುತ್ತಿರುವದರಿಂದ ಸದ್ಭಳಕೆಯಾಗಬೇಕಿದೆ ಎಂದರು. ಅಧ್ಯಕ್ಷ ಎಂ.ಪಿ. ಅಪ್ಪಚ್ಚು, ಪದಾಧಿಕಾರಿಗಳಾದ ಮನೆಯಪಂಡ ಪ್ರಾಣ್ ಬೋಪಣ್ಣ, ಮಹಾದೇವ, ಎಂ. ಎಂ. ಉಮೇಶ್ ಹಾಗೂ ಸದಸ್ಯರುಗಳು ಸನ್ಮಾನಿಸಿದರು. ಮಹೇಶ್ ಅವರ ಪೋಷಕರುಗಳಾದ ನಾಗರಾಜು ಹಾಗೂ ಲಕ್ಷ್ಮಿ ದಂಪತಿ ಪಾಲ್ಗೊಂಡಿದ್ದರು.