ಕೂಡಿಗೆ, ಮಾ. 22: ಕೂಡಿಗೆ ಗ್ರಾಮ ಪಂಚಾಯಿತಿಯ ಕಟ್ಟಡವು ಕಳೆದ 15 ವರ್ಷಗಳಿಂದ ಯಾವದೇ ರೀತಿಯಲ್ಲಿ ನವೀಕರಣಗೊಳ್ಳದೆ, ಕಂಪ್ಯೂಟರೀಕರಣ ಕೊಠಡಿಯು ಇರಲಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮತ್ತು ಸಭೆ ನಡೆಸಲು ಸಭಾಂಗಣದ ವ್ಯವಸ್ಥೆ ಸಮರ್ಪಕವಾಗಿರದ ಹಿನ್ನೆಲೆ ಈ ಸಾಲಿನ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರ ಒಕ್ಕೊರಲಿನ ತೀರ್ಮಾನದಂತೆ 14ನೇ ಹಣಕಾಸಿನ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯನ್ನು ನವೀಕರಣಗೊಳಿಸಲಾಗುತ್ತಿದೆ.
ಈ ನವೀಕರಣ ವ್ಯವಸ್ಥೆಯಲ್ಲಿ ನೂತನ ಮಾದರಿಯ ಕಂಪ್ಯೂಟರ್, ಸಿಬ್ಬಂದಿಗಳ ಕೊಠಡಿಗಳು, ಕಾರ್ಯದರ್ಶಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಕೊಠಡಿಗಳ ವ್ಯವಸ್ಥೆ ಮಾಡಲಾಗುತ್ತಿದೆ.