ಮಡಿಕೇರಿ, ಮಾ. 22: ಕೊಡವ ಹಾಕಿ ಅಕಾಡೆಮಿ ಮೂಲಕ ಆಯೋಜಿಸಲ್ಪಡುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮಾತ್ರ ನೆಲ್ಲಮಕ್ಕಡ ಕುಟುಂಬ ಭಾಗಿಯಾಗಲಿದೆ ಎಂದು ಕುಟುಂಬದ ಪ್ರಮುಖರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ಅವರು ತಿಳಿಸಿದ್ದಾರೆ.

ಈ ಹಿಂದೆ ಕೌಟುಂಬಿಕ ಹಾಕಿ ಉತ್ಸವದಲ್ಲಿ ಒಂದೆರಡು ಬಾರಿ ಚಾಂಪಿಯನ್ ಆಗಿರುವ ಈ ಕುಟುಂಬ ಹಾಕಿ ಉತ್ಸವವನ್ನೂ ಆಯೋಜಿಸಿದೆ. ಪ್ರಸ್ತುತ ಇನ್ನಿತರ ಪಂದ್ಯಾವಳಿಯಲ್ಲಿ ನೆಲ್ಲಮಕ್ಕಡ ಕುಟುಂಬ ಪಾಲ್ಗೊಳ್ಳುತ್ತಿಲ್ಲ. ಅಲ್ಲದೆ ತಂಡದ ಆಟಗಾರರಾಗಿದ್ದ ವಿಜಯ್ ಕೂಡ ಇತ್ತೀಚೆಗೆ ನಿಧನರಾಗಿದ್ದು, ಕುಟುಂಬ ಸದ್ಯದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುವ ಪಂದ್ಯದಲ್ಲಿ ತಟಸ್ಥವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.