ವೀರಾಜಪೇಟೆ, ಮಾ. 21: ವೀರಾಜಪೇಟೆ ಬಳಿಯ ಚಂಬೆಬೆಳಿಯೂರು ಕಲ್ಲ್ ತಿರಿಕೆ ಈಶ್ವರ ಪಾರ್ವತಿ ದೇವಸ್ಥಾನದಲ್ಲಿ ತಾ. 25 ರಿಂದ 30 ರವರೆಗೆ ವಾರ್ಷಿಕ ಉತ್ಸವ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಮಂಡೇಪಂಡ ಎನ್. ಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 25 ರಂದು ದೇವರ ಕಟ್ಟು ಬೀಳುವದು. ತಾ. 28 ರಂದು ಎತ್ತುಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವದು, ತಾ. 29 ರಂದು ದೊಡ್ಡಹಬ್ಬ, ಅಪರಾಹ್ನ 4 ಗಂಟೆಗೆ ದೇವರ ಜಳಕ ನಡೆಯಲಿದೆ. ತಾ. 30 ರಂದು ಶುದ್ಧ ಕಲಶ, ಅಪರಾಹ್ನ 12 ಗಂಟೆಗೆ ಮಹಾಪೂಜಾ ಸೇವೆ ನಡೆಯಲಿದೆ. ಉತ್ಸವ ಆರಂಭದಿಂದ ಕೊನೆಯ ದಿನದವರೆಗೆ ಅಪರಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಚಾರಿಮಂಡ ಜೀವನ್ ಉಪಸ್ಥಿತರಿದ್ದರು.