ಶನಿವಾರಸಂತೆ, ಮಾ. 21: ಸಮೀಪದ ಗುಡುಗಳಲೆ ಬದ್ರಿಯಾ ಜುಮಾ ಮಸ್ಜಿದ್ ಆಡಳಿತ ಮಂಡಳಿ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಹಝ್ರತ್ ಪಖೀರ್ ಷಾಹ್ವಲಿ ಯುಲ್ಲಾಹಿ ಮಖಾಂ ಉರೂಸ್ ಮುಬಾರಕ್ ತಾ. 24 ರಂದು ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ನಡೆಯಲಿದೆ. ಅಂದು ಬೆಳಿಗ್ಗೆ 11.30ಕ್ಕೆ ಮೌಲೀದ್ ಪಾರಾಯಣ ನಂತರದ 12.30 ರಿಂದ 3 ರವರೆಗೆ ಅನ್ನದಾನ ನಡೆಯಲಿದೆ. ತಾ. 22 ರಂದು (ಇಂದು) ರಾತ್ರಿ 7 ಗಂಟೆಗೆ ಅಬೂ ಝೀಯಾನ್ ಝಹೈರ್ ಅಝಹರಿ ಅವರು ಪರೀಕ್ಷಣಙಳಿಲ್ ತಳರಾದೆ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾರೆ. ಮುಸ್ತಫ ಉಸ್ತಾದ್ ಹಾಗೂ ಶಮೀರ್ ಫೈಝಿ ಹಾಜರಿರುತ್ತಾರೆ. ತಾ. 23 ರಂದು ರಾತ್ರಿ ಅಸಯ್ಯಿದ್ ಇಲ್ಯಸ್ ಅಸಖಾಪಿ ಅಲ್ ಹೈದ್ರೂಪಿ ನೇತೃತ್ವದಲ್ಲಿ ದುಅ ಮಜ್ಲಿಸ್ ನಡೆಯಲಿದೆ.
ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಹಸೈನಾರ್ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಖತೀಬ ಮುಹಮ್ಮದ್ ಝಬೈರ್ ಹೈತಮಿ ಅಲ್ ಯಮಾನಿ ಉದ್ಘಾಟಿಸುತ್ತಾರೆ. ಪ್ರಮುಖರಾದ ಸಯ್ಯದ್ ಅಲಿ ರಿಝ್ವಿ ಮಹಮ್ಮದ್ ಪೈಝಿ ಹಝ್ರತ್ ತೌಫಿಕ್, ಹಝ್ರತ್ ಅಲಿ ಅಸ್ಟನ್, ಹಝ್ರತ್ ಸೂದ್ ಆಲಂ, ಶಾಫಿ ಶಅದಿ, ಕೆ.ಎ. ಯಕೂಬ್, ಡಿ.ಎ. ಸುಲೈಮಾನ್, ಡಾ. ಇಕ್ಬಾಲ್ ಹುಸೈನ್, ಹಸೈನಾರ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಫೈಝಿ ಹಾಗೂ ವಿವಿಧೆಡೆಯ ಮಸ್ಜಿದ್ಗಳ ಅಧ್ಯಕ್ಷರು ಪಾಲ್ಗೊಳ್ಳ ಲಿದ್ದಾರೆ. ಪ್ರತಿದಿನ ರಾತ್ರಿ ಮಗ್ರಬ್ ನಮಾಝ್ನ ನಂತರ ಬದ್ರಿಯಾ ಧಫ್ ಸಂಘದಿಂದ ಆಕರ್ಷಣೀಯ ಧಫ್ ಪ್ರದರ್ಶನವಿರುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.