ರೌಡಿ ಶೀಟರ್‍ಗಳ ಪೆÀರೇಡ್‍ಕುಶಾಲನಗರ, ಮಾ. 20: ಲೋಕಸಭಾ ಚುನಾವಣೆ ಹಿನೆÀ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕುಶಾಲನಗರದಲ್ಲಿ ರೌಡಿ ಶೀಟರ್‍ಗಳ ಪೆರೇಡ್ ನಡೆಸಲಾಯಿತು. ಕುಶಾಲನಗರ ಡಿವೈಎಸ್ಪಿ ಕಚೇರಿಯಲ್ಲಿ ನಡೆದ ರೌಡಿ ಪರೇಡ್‍ನಲ್ಲಿ ಹಲವು ಅಪರಾಧಗಳಲ್ಲಿ ತೊಡಗಿಸಿಕೊಂಡು ರೌಡಿ ಲಿಸ್ಟ್‍ನಲ್ಲಿರುವ ಒಟ್ಟು 29 ಮಂದಿಗೆ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ಯಾವದೇ ಶಾಂತಿ ಭಂಗವಾಗುವ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳದಂತೆ ಎಚ್ಚರಿಕೆ ನೀಡಿದರು.
ಡಿವೈಎಸ್ಪಿ ಕಚೇರಿ ಆವರಣದಲ್ಲಿ ನಡೆದ ಪರೇಡ್‍ನಲ್ಲಿ ಸುಂಟಿಕೊಪ್ಪ ಮತ್ತು ಕುಶಾಲನಗರ ಪಟ್ಟಣ ವ್ಯಾಪ್ತಿಯ ರೌಡಿಗಳನ್ನು ಪ್ರತ್ಯೇಕವಾಗಿ ವಿಚಾರಿಸಿ ಅವರ ಇತಿಹಾಸ, ಪ್ರಸಕ್ತ ವ್ಯವಹಾರದ ಬಗ್ಗೆ ಮಾಹಿತಿ ಪಡೆದ ದಿನಕರ ಶೆಟ್ಟಿ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ತೊಡಗಿದಲ್ಲಿ ಗೂಂಡಾ ಕಾಯ್ದೆಯನ್ವಯ ಗಡಿಪಾರಿಗೆ ಕ್ರಮಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು. ನಡವಳಿಕೆಗಳನ್ನು ತಿದ್ದಿಕೊಂಡಲ್ಲಿ ಉತ್ತಮ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು. ಡಿವೈಎಸ್ಪಿ ದಿನಕರ ಶೆಟ್ಟಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ, ಸೋಮವಾರಪೇಟೆ ಉಪ ವಿಭಾಗದಿಂದ ನಾಲ್ವರು ರೌಡಿ ಶೀಟರ್‍ಗಳನ್ನು ಗಡಿಪಾರು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಠಾಣಾಧಿಕಾರಿಗಳಾದ ಜಗದೀಶ್, ನಂದೀಶ್, ಸೋಮೇಗೌಡ, ಅರ್ಚನ, ಬಿ.ಎನ್.ಶಿವಪ್ಪ ಮತ್ತಿತರರು ಇದ್ದರು.