ಗುಡ್ಡೆಹೊಸೂರು, ಮಾ. 20: ಸಮೀಪದ ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ತಾ. 24, 25, 26 ಮತ್ತು 27 ರಂದು ನಡೆಯಲಿದೆ. ತಾ. 24 ರಂದು ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸುವದು. ಶ್ರೀದೇವಿಬಲಿ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ. ತಾ. 25 ರಂದು ಮಧ್ಯಾಹ್ನ 3 ಗಂಟೆಯಿಂದ ಪಟ್ಟಣಿ, ಎತ್ತುಹೇರು, ಶ್ರೀದೇವಿಬಲಿ, ಅಲಂಕಾರಪೂಜೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ತಾ. 26 ರಂದು ಮಧ್ಯಾಹ್ನ 3 ಗಂಟೆಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವದು, ಶ್ರೀದೇವಿ ಅವಭೃತ ಸ್ನಾನ, ಶ್ರೀದೇವಿ ಬಲಿನೃತ್ಯ, ಅಲಂಕಾರಪೂಜೆ ನಡೆಯಲಿದೆ. ತಾ. 27 ರಂದು ಬೆಳಿಗ್ಗೆ 9 ಗಂಟೆಯಿಂದ ಶುದ್ಧ ಕಲಶ, ಮಹಾಪೂಜೆ ನಡೆಯಲಿದೆ.