ಮಡಿಕೇರಿ, ಮಾ. 20: ಇಲ್ಲಿನ ರೋಟರಿ ಸಂಸ್ಥೆಯ ಸಭಾಂಗಣದಲ್ಲಿ ತಾ. 22 ರಂದು (ನಾಳೆ) ಸಂಜೆ 6 ಗಂಟೆಗೆ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಆರ್ಥಿಕ ನೆರವು ಕಲ್ಪಿಸಲಾಗುತ್ತಿದ್ದು, ‘ಶಕ್ತಿ’ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಹಾಗೂ ರೋಟರಿ ಸಂಸ್ಥೆಯ ಎಂ.ಪಿ. ಚೀಯಣ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.