ನಾಪೆÇೀಕ್ಲು, ಮಾ. 20: ರಕ್ತದಾನವು ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾದುದು ಎಂದು ಜಿಲ್ಲಾ ಉಪಮುಖ್ಯ ವೈದ್ಯಾಧಿಕಾರಿ ಡಾ. ದೇವದಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್‍ಕ್ರಾಸ್ ಘಟಕ ಮತ್ತು ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠವಾದುದು. ಒಂದು ಹನಿ ರಕ್ತ ಒಂದು ಜೀವವನ್ನು ಉಳಿಸಬಹುದು. ಆದುದರಿಂದ ಯುವಜನತೆ ಹೆಚ್ಚು ರಕ್ತದಾನ ಮಾಡುವದರ ಮೂಲಕ ವ್ಯಕ್ತಿಗಳ ಪ್ರಾಣ ಉಳಿಸಲು ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ರಕ್ತನಿಧಿ ಕೇಂದ್ರದ ಡಾ. ರವಿ ಕರುಂಬಯ್ಯ ರಕ್ತದಾನದಿಂದ ಮನುಷ್ಯನ ದೇಹದ ಆರೋಗ್ಯ ವೃದ್ಧಿಸುತ್ತದೆ. ಒಬ್ಬ ನೀಡುವ ರಕ್ತದಿಂದ ಕನಿಷ್ಟ ನಾಲ್ಕು ರೋಗಿಗಳ ಪ್ರಾಣ ಉಳಿಸಬಹುದು. ವರ್ಷಕ್ಕೆ ಎರಡು-ಮೂರು ಬಾರಿ ರಕ್ತದಾನ ಮಾಡುವದರಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಪ್ರಾಧ್ಯಾಪಕರಾದ ನಂದೀಶ್, ಲೀನಾ, ಕೆ.ಎಂ. ಮುದ್ದಪ್ಪ, ಮನೋಜ್ ಕುಮಾರ್, ವಿನೋದ್ ಬಿ.ಎಸ್, ಕೆ. ಅರವಿಂದ್, ಮತ್ತಿತರರು ಇದ್ದರು.