ಮಡಿಕೇರಿ, ಮಾ. 20: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿಸ್ತರಣಾ ಶಿಕ್ಷಣ ಘಟಕ ಮಡಿಕೇರಿ ಇವರ ವತಿಯಿಂದ 6 ದಿನಗಳ ಜೇನು ಕೃಷಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ತಾ. 22 ರಿಂದ 28ರವರಗೆ ಮಡಿಕೇರಿ, ಪೆÇನ್ನಂಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ತರಬೇತಿಯು ಉಚಿತವಾಗಿದ್ದು, ಪ್ರತಿ ದಿನ ಬೆಳಿಗ್ಗೆ 10 ಗಂಟೆಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಪ್ರಾರಂಭವಾಗಲಿವೆ.

ಆಸಕ್ತರು ತಮ್ಮ ಹೆಸರು ನೋಂದಾವಣಿಗಾಗಿ ಮತ್ತು ಮಾಹಿತಿಗಾಗಿ ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ 08272-225539, 223393 ಸಂಪರ್ಕಿಸಬಹುದು.