ಮಡಿಕೇರಿ, ಮಾ. 20: ವೃದ್ಧಾ ಶ್ರಮಗಳಲ್ಲಿ ಆಶ್ರಯ ಪಡೆಯುತ್ತಿರು ವವರ ನೆರವಿಗಾಗಿ ಔಷಧಿಗಳನ್ನು ಸಂಗ್ರಹಿಸಿ ನೀಡುವ ಸಲುವಾಗಿ ಔಷಧಿ ಸಂಗ್ರಹ ಪೆಟ್ಟಿಗೆಯನ್ನು ಮಡಿಕೇರಿಯ ಕೈಗಾರಿಕಾ ಬಡಾವಣೆ ಜಂಕ್ಷನ್‍ನಲ್ಲಿರುವ ತಾರಾಪೈ ಜ್ಯುವೆಲ್ಲರಿ ಅಂಗಡಿ ಬಳಿ ಅಳವಡಿಸಲಾಯಿತು.

ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ ಹಾಗೂ ಮಾನವೀಯ ಸ್ನೇಹಿತರ ಒಕ್ಕೂಟ ವ್ಯಾಟ್ಸ್‍ಪ್ ಬಳಗದ ಸಹಯೋಗದೊಂದಿಗೆ ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ರವಿಗೌಡ ಅವರು, ನಮ್ಮ ಆರೋಗ್ಯ ಕೆಟ್ಟಾಗ ಖರೀದಿಸುವ ಔಷಧಿಗಳು ಉಳಿಕೆಯಾದಲ್ಲಿ ಅದನ್ನು ಎಸೆಯದೆ ಈ ಪೆಟ್ಟಿಗೆಯೊಳಗೆ ಹಾಕಿದರೆ ಅದನ್ನು ವೃದ್ಧಾಶ್ರಮಗಳಿಗೆ ತಲಪಿಸಲಾಗುವದು. ಇದರಿಂದ ಇನ್ನೊಂದು ಜೀವ ಉಳಿಸಿದಂತಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ವೈದ್ಯರ ಸಲಹೆ ಮೂಲಕ ಔಷಧಿಗಳನ್ನು ಪರಿಶೀಲಿಸಿ ಆಶ್ರಮಗಳಿಗೆ ನೀಡಲಾಗುವದು. ಮಾರುಕಟ್ಟೆ ಹಾಗೂ ಚಿಕ್ಕಪೇಟೆಯಲ್ಲೂ ಪೆಟ್ಟಿಗೆಗಳನ್ನು ಅಳವಡಿಸಲಾಗುವದು. ಮುಂದಿನ ದಿನಗಳಲ್ಲಿ ವೀರಾಜಪೇಟೆ ಹಾಗೂ ಕುಶಾಲನಗರದಲ್ಲೂ ಅಳವಡಿಸಲಾಗುವದೆಂದು ಮಾಹಿತಿ ನೀಡಿದರು. ಬಳಗದ ಮೈಕಲ್, ಸತೀಶ್ ಪೈ, ದಿವಾಕರ್ (ಜಾಕಿ), ಮೋಹನ್, ಲೋಕೇಶ್, ಅಕ್ಷಿತ್ ಸೇರಿದಂತೆ ಇತರ ಸದಸ್ಯರುಗಳಿದ್ದರು.