ನಾಪೆÉÇೀಕ್ಲು, ಮಾ. 19: ಐತಿಹಾಸಿಕ ನಾಪೆÉÇೀಕ್ಲು ಶ್ರೀ ಭಗವತಿ ದೇವರ ವಾರ್ಷಿಕ ಹಬ್ಬದ ಪ್ರಯುಕ್ತ ಪಟ್ಟಣಿ ಹಬ್ಬವು ವಿಜೃಂಭಣೆಯಿಂದ ನಡೆಯಿತು.
ನಿಗದಿತ ಸಮಯಕ್ಕೆ ಸರಿಯಾಗಿ ಊರಿನವರು ದೇವಳದಲ್ಲಿ ನೆರೆದು ಕೊಡಗಿನ ಸಾಂಪ್ರಾದಾಯಿಕ ಬೊಳ್ಕಾಟ್ ಕಾರ್ಯಕ್ರಮ ನಡೆದ ನಂತರ 12 ಗಂಟೆಗೆ ಎತ್ತುಪೋರಾಟ ದೊಂದಿಗೆ ದೇವಾಲಯದ ಪ್ರದಕ್ಷಿಣೆ ಬರಲಾಯಿತು. ಈ ಸಂದರ್ಭ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನವನ್ನು ಏರ್ಪಾಡಿಸಲಾಗಿದ್ದÀು ಸಾಯಂಕಾಲ ದೇವಳದಲ್ಲಿ ದೇವರ ಮೂರ್ತಿ ಹೊತ್ತು ನೃತ್ಯ ಬಲಿ ಕಾರ್ಯಕ್ರಮ ನಡೆಯಿತು. ತಾ, 20 ರಂದು ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ಮತ್ತು ನಗರದಲ್ಲಿ ದೇವರ ಮೂರ್ತಿಯ ಮೆರವಣಿಗೆ ನಡೆಯಲಿದೆ.
ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಕೆ.ಜಿ. ಬೋಪಯ್ಯ ಮತ್ತು ಬಿ.ಜೆ.ಪಿ. ಪದಾಧಿಕಾರಿಗಳು, ನಾಪೆÇೀಕ್ಲು ಭಗವತಿ ದೇವಳದ ಪಟ್ಟಣಿ ಹಬ್ಬದಲ್ಲಿ ಪಾಲ್ಗೊಂಡಿದ್ದರು.