ಮಡಿಕೇರಿ, ಮಾ. 19: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. 22 ರಿಂದ ತಾ. 26ರ ವರೆಗೆ ನಡೆಯಲಿದೆ.
ತಾ. 22 ರಂದು ಸಂಜೆ ಭಂಡಾರ ತರುವದು, ತಾ. 23 ರಂದು ಬೆಳಿಗ್ಗೆ ಮತ್ತು ಸಂಜೆ ದೇವರು ಬಲಿ ಬರುವದು, ರಾತ್ರಿ ಕೊಟ್ಟಿ ಹಾಡುವದು, ತಾ. 24ರ ಬೆಳಿಗ್ಗೆ ಮತ್ತು ಸಂಜೆ ಅಂದಿ ಬೆಳಕು ಹಾಗೂ ದೇವರು ಬಲಿ ಬರುವದು. ತಾ. 25 ರಂದು ಬೆಳಿಗ್ಗೆ ಎತ್ತು ಪೋರಾಟ, ಹಬ್ಬದ ಕಟ್ಟು ಮುರಿಯುವದು, ಬೊಳಕಾಟ್, ಅನ್ನದಾನ, ದೇವರ ನೆರಪುಬಲಿ ಹಾಗೂ ಪರದೇವರ ಮತ್ತು ಅಯ್ಯಪ್ಪ ಕುಟ್ಟಿಚಾತ ಕೋಲ ನಡೆಯಲಿದೆ.
ತಾ. 26 ರಂದು ಸಂಜೆ 4.30ಕ್ಕೆ ದೇವರ ಜಳಕ ಕಾರ್ಯ ನಡೆಯಲಿರುವದು ಎಂದು ತಕ್ಕ ಮುಖ್ಯಸ್ಥರು, ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಊರಿನವರು ತಿಳಿಸಿರುತ್ತಾರೆ.