ಮಡಿಕೇರಿ, ಮಾ. 19: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಯೋಜನೆಗಳ ಮೂಲಕ ಕರ್ನಾಟಕದಲ್ಲಿ ಅತೀ ಹೆಚ್ಚು ಅನುದಾನ ಬಳಸಿದ ಸಂಸದನೆಂಬ ಹಿರಿಮೆಗೆ ತಾನು ಪಾತ್ರನಾಗಿದ್ದು, ಈ ಕ್ಷೇತ್ರದಿಂದ ಮರು ಆಯ್ಕೆಯಾದಲ್ಲಿ ಮತ್ತಷ್ಟು ಅನುದಾನದೊಂದಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ದನಾಗಿರುವ ದಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.ಮಡಿಕೇರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳಾದ ಹಾಕತ್ತೂರಿನ ತೊಂಭತ್ತುಮನೆ ಪೈಸಾರಿ, ನಾಪೆÇೀಕ್ಲು, ಚೆಯ್ಯಂಡಾಣೆ, ಮೂರ್ನಾಡು, ಕಡಗದಾಳು, ಗಾಳಿಬೀಡು ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಬಿಜೆಪಿಯ ಶಕ್ತಿ ಕೇಂದ್ರದಂತಿರುವ ಕೊಡಗು ದೇಶಪ್ರೇಮವನ್ನು ಜಗತ್ತಿಗೆ ಹೇಳಿಕೊಟ್ಟ ವೀರರ ಜಿಲ್ಲೆಯಾಗಿದ್ದು ದೇಶದ ಹಿತಚಿಂತನೆಯಿಂದ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕೊಡಗಿನ ಮತದಾರರು ಬಿಜೆಪಿಗೆ ಮತ ಹಾಕುವಂತೆ ಕೋರಿದರು.ಮೋದಿಯವರು ಪ್ರಧಾನಿಯಾಗಿ ಜಾತಿ, ಧರ್ಮ ಬೇಧವಿಲ್ಲದೇ ಯೋಜ ನೆಗಳನ್ನು ಯೋಗ್ಯ ಫಲಾನುಭವಿಗಳಿಗೆ ನೀಡಿದ್ದಾರೆ. ಮುಂದಿನ ಪೀಳಿಗೆಯ ಚಿಂತನೆಯನ್ನು ಸದಾ ಮಾಡುವ ಮೋದಿ ಯುವಪೀಳಿಗೆಯ ಹಿತದೃಷ್ಟಿ ಯಿಂದ ಅನೇಕ ಯೋಜನೆಗಳನ್ನು ಜಾರಿಗೆ (ಮೊದಲ ಪುಟದಿಂದ) ತಂದಿದ್ದಾರೆ ಎಂದರಲ್ಲದೇ, ಬಿಜೆಪಿ ಕಾರ್ಯಕರ್ತರು ಉದಾಸೀನ ಮನೋಭಾವನೆ ಬಿಟ್ಟು ಈ ಬಾರಿ ಪ್ರತೀ ಗ್ರಾಮದಲ್ಲಿಯೂ ಅತ್ಯಧಿಕ ಪ್ರಮಾಣದಲ್ಲಿ ಮತದಾನ ಆಗುವಂತೆ ಗಮನ ಹರಿಸಬೇಕೆಂದು ಮನವಿ ಮಾಡಿದರು.

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇದು ದೇಶಭಕ್ತರ ಮತ್ತು ದೇಶ ಹಾಳುಗೆಡಹುವವರ ನಡುವಿನ ಧರ್ಮ ಯುದ್ಧದಂಥ ಸವಾಲಿನ ಚುನಾವಣೆಯಾಗಿದ್ದು, ಮೋದಿಯವರ 5 ವರ್ಷಗಳ ಸಾಧನೆಯನ್ನು ಇಡೀ ಜಗತ್ತೇ ಗಮನಿಸಿ ಶ್ಲಾಘಿಸಿರುವಾಗ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸುವದು ನಮ್ಮೆಲ್ಲರ ಗುರಿ.

ಆ ದಿಸೆಯಲ್ಲಿ ಕೊಡಗು ಮೈಸೂರು ಕ್ಷೇತ್ರವನ್ನು ಮತ್ತೊಮ್ಮೆ ಬಿಜೆಪಿಗೆ ಉಳಿಸಿಕೊಳ್ಳಲೇಬೇಕಾಗಿದೆ ಎಂದೂ ಬೋಪಯ್ಯ ಹೇಳಿದರಲ್ಲದೆ, ಕಡ್ಡಾಯವಾಗಿ ಮತದಾರರೆಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಗಮನ ಹರಿಸುವಂತೆ ಸೂಚಿಸಿದರು.

ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ವಿರುದ್ಧ ಕಿಡಿಕಾರಿದರಲ್ಲದೆ, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ವಿಜಯಶಂಕರ್, ಮಾಧವ ಗಾಡ್ಗೀಲ್, ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಯತ್ನ ಪಟ್ಟರಲ್ಲದೆ, ತಾನು ಮತ್ತು ಶಾಸಕ ಕೆ.ಜಿ. ಬೋಪಯ್ಯ ಸತತವಾಗಿ ವಿಜಯಶಂಕರ್ ಅವರೊಂದಿಗೆ ವಾಗ್ವಾದ ಮಾಡಿ ವರದಿ ಜಾರಿಗೆ ಅಡ್ಡಿಯುಂಟು ಮಾಡಿದ್ದೆವು. ಇಂಥ ಮನಸ್ಥಿತಿಯ ವ್ಯಕ್ತಿ ಈಗ ಕೊಡಗಿನಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಕೊಡಗಿನ ಜನತೆ ತಕ್ಕ ಪಾಠ ಕಲಿಸಲೇಬೇಕಾಗಿದೆ ಎಂದು ಕರೆ ನೀಡಿದರು.

ಕುಮಾರಸ್ವಾಮಿ ಸಾಲ ಮನ್ನಾ ಎಂದು ಪೆÇಳ್ಳು ಭರವಸೆ ನೀಡಿದ್ದಾರೆಯೇ ವಿನಾ ಸಾಲ ಮನ್ನಾ ಮಾಡಲೇ ಇಲ್ಲ. ಒಂದು ರೀತಿಯಲ್ಲಿ ರೈತರಿಗೆ ಸುಳ್ಳಿನ ಪ್ರೇಮ ಪತ್ರವನ್ನು ಕುಮಾರಸ್ವಾಮಿ ಬರೆದಿದ್ದಾರೆ. ಇಂಥ ಭರವಸೆಗಳನ್ನು ನಂಬಬೇಡಿ ಎಂದೂ ರಂಜನ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಕೆಲವು ಜನ ಬಿಜೆಪಿಯ ಪರವಾಗಿರುತ್ತಾರೆ. ಆದರೆ ಮತದಾನದ ದಿನ ಮಾತ್ರ ಮತಹಾಕದೇ ಮನೆಯಲ್ಲಿ ಕುಳಿತು ದೇಶದ ಬಗ್ಗೆ ಮಾತನಾಡುತ್ತಾರೆ. ಇಂಥವರು ಈ ಬಾರಿ ದೇಶದ ಹಿತದೃಷ್ಟಿಯಿಂದ ಮತದಾನಕ್ಕೆ ಕಡ್ಡಾಯವಾಗಿ ಬರುವಂತೆ ಬಿಜೆಪಿ ಕಾರ್ಯಕರ್ತರು ಗಮನ ಹರಿಸುವಂತೆ ಸಲಹೆ ನೀಡಿದರು.

ಟಿಪ್ಪುಜಯಂತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದ ಸಿದ್ದರಾಮಯ್ಯ ಅವರ ಶಿಷ್ಯ ವಿಜಯಶಂಕರ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ. ಟಿಪ್ಪುಜಯಂತಿಗೆ ಪರವಾಗಿರುವವರನ್ನು ದೂರವಿಡುವದು ಕೊಡಗಿನ ಮತದಾರರ ಕರ್ತವ್ಯವಾಗಬೇಕೆಂದೂ ಸುನಿಲ್ ಸುಬ್ರಮಣಿ ತಿಳಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ದೇಶಪ್ರೇಮ ಹೊಂದಿರುವ ಪ್ರತೀ ಭಾರತೀಯನೂ ಮೋದಿಯ ಕಾರ್ಯಯೋಜನೆಗಳನ್ನು ಮನವರಿಕೆ ಮಾಡಿಕೊಂಡು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಭೆಗಳಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯರಾದ ಮುರಳಿ ಕರುಂಬಮ್ಮಯ್ಯ, ಕಿರಣ್ ಕಾರ್ಯಪ್ಪ, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರುಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ತಮ್ಮಯ್ಯ, ಡೀನ್ ಬೋಪಣ್ಣ, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಮುನಾ ಚಂಗಪ್ಪ, ಮಡಿಕೇರಿ ನಗರ ಅಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಬಿ.ಕೆ. ಅರುಣ್ ಕುಮಾರ್, ರಾಬಿನ್ ದೇವಯ್ಯ, ಕಾಂಗೀರ ಸತೀಶ್ ಉಮೇಶ್ ಸುಬ್ರಮಣಿ, ಪ್ರಮುಖರಾದ ಪೆÇನ್ನಚ್ಚನ ಮಧು, ಸುಕುಮಾರ್, ಜೋಯಪ್ಪ, ಬೆಪ್ಪುರನ ಮೇದಪ್ಪ, ಬೆಳ್ಯಪ್ಪ, ಉಷಾ ದೇವಮ್ಮ, ಉಮಾಪ್ರಭು ಸೇರಿದಂತೆ ಬಿಜೆಪಿಯ ವಿವಿಧ ಘಟಕಗಳ ಪದಾಧಿಕಾರಿಗಳು ಆಯಾ ಕ್ಷೇತ್ರಗಳ ಜಿ.ಪಂ., ತಾ.ಪಂ., ಗ್ರಾ.ಪಂ. ಪ್ರತಿನಿಧಿಗಳು ಸಭೆಗಳಲ್ಲಿ ಪಾಲ್ಗೊಂಡಿದ್ದರು.