ಕೂಡಿಗೆ, ಮಾ. 18: ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಕೂಡಿಗೆ ಶಕ್ತಿ ಕೇಂದ್ರದ ಸಭೆಯು ಕೂಡ್ಲೂರಿನ ಟೈನಿಟಾಟ್ಸ್ ಪ್ರಿ ಕೆ.ಜಿ. ಶಾಲೆಯಲ್ಲಿ ನೆರವೇರಿತು.

ಶಾಸಕ ಅಪ್ಪಚ್ಚು ರಂಜನ್, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಭಾರತೀಶ್, ಕ್ಷೇತ್ರಾಧ್ಯಕ್ಷ ಕುಮಾರಪ್ಪ, ತಾಲೂಕಿನ ಪ್ರಧಾನ ಕಾರ್ಯದರ್ಶಿ ಕೆ. ವರದ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ತಾಲೂಕಿನ ಎಸ್.ಸಿ. ಮೋರ್ಚಾಧ್ಯಕ್ಷ ಕುಮಾರಸ್ವಾಮಿ, ಎಸ್.ಟಿ. ಮೋರ್ಚಾಧ್ಯಕ್ಷ ಪ್ರಭಾಕರ, ವಿಸ್ತಾರಕರಾದ ಡಾ. ಸಿದ್ದು ಪ್ರಕಾಶ್, ಪ್ರಮುಖರಾದ ಆರ್. ಕೃಷ್ಣ, ಕೇಶವರೈ, ಐಮುಡಿಯಂಡ ಗಣೇಶ, ಮಣಿ, ಮೂರು ಗ್ರಾಮ ಪಂಚಾಯಿತಿ ಸದಸ್ಯರು, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಬಿಜೆಪಿ ಪ್ರಮುಖರು ಇದ್ದರು.