ಸೋಮವಾರಪೇಟೆ,ಮಾ.18: ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಜಿಲ್ಲೆಯ ಈರ್ವರು ವಿದ್ಯಾರ್ಥಿನಿಯರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಸೋಮವಾರಪೇಟೆ ಸಮೀಪದ ತೋಳೂರುಶೆಟ್ಟಳ್ಳಿ ನಿವಾಸಿ ಶಿಕ್ಷಕ ಶಿವಕುಮಾರ್ ಮತ್ತು ಚಂದ್ರಮ್ಮ ದಂಪತಿ ಪುತ್ರಿ ಚಾವಡಿ ಪ್ರಜ್ಞಾ ಇವರು ಎಂ.ಎಸ್ಸಿ (ಜೆನೆಟಿಕ್ಸ್) ನಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಅಂತೆಯೇ ಮಡಿಕೇರಿ ತಾಲೂಕು ಬೆಟ್ಟತ್ತೂರಿನ ಕಡ್ಯದ ಪ್ರಕಾಶ್ ಮತ್ತು ಜ್ಯೋತಿ ದಂಪತಿ ಪುತ್ರಿ ಕಡ್ಯದ ಅಕ್ಷತಾ ಎಂ.ಎ.(ಪತ್ರಿಕೋದ್ಯಮ)ಯಲ್ಲಿ 1 ಚಿನ್ನದ ಪದಕ ಪಡೆದಿದ್ದಾರೆ.