ವೀರಾಜಪೇಟೆ, ಮಾ. 18: ಪ್ರತಿಯೊಬ್ಬ ಮತ ಚಲಾಯಿಸಬೇಕು, ಮತಗಳ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ 18 ವರ್ಷ ತುಂಬಿದ ಯುವ ಜನರಿಗೆ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ, ಜಿಲ್ಲಾ ಪಂಚಾಯತ್, ಎಸ್‍ವಿಇಇಪಿ ಸ್ವೀಪ್ ಸಮಿತಿ ಮತ್ತು ಕೊಡಗು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಆಶ್ರಯದಲ್ಲಿ ನೋಡಲ್ ಅಧಿಕಾರಿಗಳು ಬಿಎಲ್‍ಓ ಮತ್ತು ಮತದಾರ ಸಾಕ್ಷರತಾ ಕ್ಲಬ್ ಸಂಚಾಲಕರುಗಳಿಗೆ ಗೋಣಿಕೊಪ್ಪ ಪ್ರೌಢಶಾಲಾ ಸಭಾಂಗಣದಲ್ಲಿ, ಪೊನ್ನಂಪೇಟೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ವೀರಾಜಪೇಟೆ ಜೆ.ಪಿ.ಎನ್.ಎಂ. ಪ್ರೌಢ ಶಾಲಾ ಸಭಾಂಗಣದಲ್ಲಿ ತರಭೇತಿ ಕಾರ್ಯಗಾರ ಆಯೋಜಿಸಲಾಗಿತ್ತು.

ತರಬೇತಿ ಕಾರ್ಯಗಾರದಲ್ಲಿ ವಿವಿಧ ಮತಗಟ್ಟೆಯ ಕೇಂದ್ರದ ಅಧಿಕಾರಿಗಳು, ಪ್ರೌಢಶಾಲಾ ಶಿಕ್ಷಕರಿಗೂ ಮತ್ತು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೂ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ಬಿ.ಆರ್.ಸಿ.ಯ ಬಿ.ಪಿ.ಉತ್ತಪ್ಪ, ಸಂಯೊಜಕ ಕೆ.ಪ್ರಸನ್ನಕುಮಾರ್, ಸಿ.ಆರ್.ಪಿ.ಸತೀಶ್, ಸಂಪನ್ಮೂಲ ವ್ಯಕ್ತಿಗಳಾದ ಸತ್ಯನಾರಾಯಣ, ನೂತನ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.