ಮಡಿಕೇರಿ, ಮಾ. 17: ಬೆಂಗಳೂರಿನಲ್ಲಿ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಉದ್ಯಮಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಕೊಡಗಿನ ಗೋಣಿಕೊಪ್ಪದ ಪ್ರಸಾದ್ ಕ್ಯಾಂಡಲ್ಸ್‍ನ ವ್ಯವಸ್ಥಾಪಕ ಪಾಲುದಾರರಾದ ಕೆ.ಎನ್. ಸುನೀತಾ 2019 ರ ಅತ್ಯುತ್ತಮ ಮಹಿಳಾ ಸಾಧಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.