ಸುಂಟಿಕೊಪ್ಪ, ಮಾ. 17: 3 ವರ್ಷಗಳ ಹಿಂದೆ ಸುಂಟಿಕೊಪ್ಪ ನಾಡ ಕಚೇರಿಯ ಒತ್ತಿನಲ್ಲಿರುವ ಕಂದಾಯ ಪರಿವೀಕ್ಷಕರಿಗೆ ಮೀಸಲಿರಿಸಿದ ವಸತಿಗೃಹದಲ್ಲಿರಿಸಿದ್ದ ಹಂಡೆ ಕಳ್ಳತನವಾಗಿತ್ತು. ಆನಂತರ ಸ್ಥಳೀಯ ರಾಜಕಾರಣಿಯೋರ್ವರ ಪ್ರಭಾವದಿಂದ ದೂರು ಠಾಣೆಗೆ ತಲುಪದೆ ಆರೋಪಿಗೆ ಮುಕ್ತಿ ಸಿಕ್ಕಿತ್ತು. ಕದ್ದ ಮಾಲು ವಸತಿ ಗೃಹಕ್ಕೆ ತಂದಿರಿಸಲಾಗಿತ್ತು. ಆಗಿನ ಕಂದಾಯ ಪರಿವೀಕ್ಷಕರು ರಾಜಿಗೆ ಒಪ್ಪಿಸಿ ರಾಜಕಾರಣಿಯೋರ್ವರ ಮದ್ಯ ಪ್ರವೇಶದಿಂದ ಹಂಡೆ ಕದ್ದ ಗ್ರಾ.ಪಂ. ಸದಸ್ಯೆಯೋರ್ವರ ಪತಿ ಹಂಡೆಯನ್ನು ಕದ್ದ ಸ್ಥಳದಲ್ಲೇ ತಂದಿರಿಸಿ ಪಾರಾಗಿದ್ದರು. ಈಗ ಈ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಸರಕಾರಿ ವಸತಿಗೃಹ ಶಿಥಿಲಾವಸ್ಥೆಯಲ್ಲಿದ್ದು ಕಿಟಕಿ ಸರಳುಗಳು ಕಿತ್ತು ಹೋಗಿದೆ ಅನೈತಿಕ ಮದ್ಯವ್ಯಸನಿಗಳ ಗಾಂಜಾ ಸೇವಕರ ಹಡಗುತಾಣವಾಗಿ ಮಾರ್ಪಟ್ಟಿದೆ. ಕೆಲ ತಿಂಗಳಿನ ಹಿಂದೆ ಗಾಂಜಾ ಮಾರಾಟಗಾರನ್ನೊಬ್ಬನನ್ನು ಇಲ್ಲಿಂದ ಬಂಧಿಸಲಾಗಿತ್ತು. ಈ ವಸತಿಗೃಹದಲ್ಲಿದ್ದ ಹಂಡೆ ಕಾಣೆಯಾಗಿದ್ದ ಬಗ್ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಸದಸ್ಯರುಗಳು ಬಿಸಿ ಬಿಸಿ ಚರ್ಚೆ ನಡೆಸಲಾಯಿತು. ಕಂದಾಯ ವಸತಿ ಗೃಹದಲ್ಲಿದ್ದ ಹಂಡೆ ಇದ್ದೆಯಾ ಇಲ್ಲವಾ ಎಂಬ ಬಗ್ಗೆ ಮಾಹಿತಿ ನೀಡಬೇಕೆಂದು ನಿರ್ಣಯ ಕೈಗೊಂಡು ಕಂದಾಯ ಪರಿವೀಕ್ಷಕರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಹಂಡೆ ಎಲ್ಲಿ ಹೋಯಿತು ಎಂದು ಸದಸ್ಯರುಗಳಿಗೆ ಕುತೂಹಲ ಮೂಡಿಸಿದೆ.