ವೀರಾಜಪೇಟೆ, ಮಾ. 17: ಕೇರಳ ರಾಜ್ಯದ ಕಣ್ಣಾನೂರಿನ ಅಂಗಡಿಕಡವ್‍ನ ಡೋನ್ ಬೋಸ್ಕೊ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಇನ್ಸ್‍ಪೈರೋ 19 ಎಂಬ ಶೀರ್ಷಿಕೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಫೆಸ್ಟ್‍ನಲ್ಲಿ ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಕಾಲೇಜಿನ 19 ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡರು.

ಹಲವು ಹಂತದಲ್ಲಿ ನಡೆದ ಫೆಸ್ಟ್‍ನಲ್ಲಿ ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿ, ಭರತ್ ಕ್ವಿಜ್‍ನಲ್ಲಿ ಪ್ರಥಮ, ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿ ಗಿರಿಧರ್ ಮತ್ತು, ತೃತೀಯ ಬಿ.ಕಾಂ. ವಿದ್ಯಾರ್ಥಿ ಶಯನ್ ಚಿಟ್ಟಿಯಪ್ಪ ಪ್ರಸ್ತುತಪಡಿಸುವದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿನಿ ಭೂಮಿಕಾ ಮತ್ತು ಸುನೇಹಾ ವೆಬ್ ಡಿಸೈನಿಂಗ್‍ನಲ್ಲಿ ದ್ವಿತೀಯ ಸ್ಥಾನ ತೃತೀಯ ಬಿ.ಬಿಎ. ವಿದ್ಯಾರ್ಥಿಗಳಾದ ಪ್ರಿಯಾಂಕ, ನಿಕೇತಾ ಜೋಯ್ಸ್, ಮೊಹಮ್ಮದ್ ಹನೀಫ್, ಅಬ್ದುಲ್ ಕೋಯಂ, ಮಾರ್ಕೇಟಿಂಗ್‍ನಲ್ಲಿ ಪ್ರಥಮ ಸ್ಥಾನ ಪಡೆದರು.

ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿಗಳಾದ ಕುಶಾಲಪ್ಪ ಮತ್ತು ದಿಗ್ವಿಜಯ್, ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಐ.ಟಿ. ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆಗೈದಿರುವದು ವಿಶೇಷವಾಗಿದೆ.