ಮಡಿಕೇರಿ, ಮಾ. 17: ಮಹದೇವ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಯನ್. ಸವಿತಾಭಟ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಕನ್ನಂಡ ಕವಿತಾ ಬೊಳ್ಳಪ್ಪ ಪ್ರಾರ್ಥಿಸಿದರು. ಸವಿತಾ ಭಟ್ ಮಹಿಳಾ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಬಳಿಕ ಸಮಾಜ ಸೇವಕಿ ಸಲೀಲಾ ಪಾಟ್ಕರ್ ಅವರನ್ನು ಸನ್ಮಾನಿಸಲಾಯಿತು. ಸದಸ್ಯೆಯರಿಗಾಗಿ ಅಡುಗೆ ಸ್ಪರ್ಧೆ, ಹೂ ಜೋಡಣೆ ಮತ್ತು ಹಾಡಿನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶೈಲಾ ಮಂಜುನಾಥ್ ಸ್ವಾಗತಿಸಿ, ನಮಿತಾರಾವ್ ನಿರೂಪಿಸಿದರೆ, ವಸುಂಧರಾ ಪ್ರಸನ್ನ ವಂದಿಸಿದರು.