ಗುಡ್ಡೆಹೊಸೂರು, ಮಾ. 17: ಇಲ್ಲಿನ ಬಿ.ಜೆ.ಪಿ ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಸಭೆ ಇಲ್ಲಿನ ನಂದಿನಿ ಸಭಾಂಗಣದಲ್ಲಿ ಬಿ.ಜೆ.ಪಿ ಮುಖಂಡ ಜಿ.ಎಂ. ಮಣಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಿರಿಯಾಪಟ್ಟಣ ತಾಲೂಕು ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮ್ ಗೌಡ ಉಪಸ್ಥಿತರಿದ್ದು ಪ್ರಧಾನಮಂತ್ರಿ ಮೋದಿ ಅವರ ಸಾಧನೆ ಬಗ್ಗೆ ತಿಳಿಸಿದರು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಮುಂದೆ ಮೋದಿ ಅವರನ್ನು ಪ್ರಧಾನಿ ಮಾಡಲು ಬೂತ್ಮಟ್ಟದಿಂದ ಕಾರ್ಯಕರ್ತರು ಪ್ರಯತ್ನಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಸ್ಥಾನಿಯ ಸಮಿತಿ ಅಧ್ಯಕ್ಷ ಎಂ.ಆರ್. ಉತ್ತಪ್ಪ ಬೂತ್ ಅಧ್ಯಕ್ಷರುಗಳಾದ ದೇವಪ್ಪ, ಕೆ.ಡಿ. ಗಿರೀಶ್, ಕೇಶು, ಎಂ.ಆರ್. ಮಾದಪ್ಪ, ಸುರೇಶ್ ಮತ್ತು ಪಂಚಾಯಿತಿ ಸದಸ್ಯರಾದ ಶಶಿ, ಪ್ರವೀಣ್, ಪುಷ್ಪ, ಪಾರ್ವತಿ ಮುಂತಾದವರು ಹಾಜರಿದ್ದರು.
ಸಭೆಯ ಬಳಿಕ ಮನೆ ಮನೆಯ ಭೇಟಿ ಕಾರ್ಯ ನಡೆಯಿತು. ಈ ಸಂದರ್ಭ ಹಲವಾರು ಮನೆಗಳಿಗೆ ತೆರಳಿ ಮೋದಿ ಅವರ ಸಾಧನೆಯ ಕರಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮವನ್ನು ಗಣೇಶ್ ನಿರೂಪಿಸಿ, ಸ್ವಾಗತಿಸಿದರು. ಬಿ.ಜೆ.ಪಿ ಜಿಲ್ಲಾ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಬಿ.ಕೆ. ಮೋಹನ್ ವಂದಿಸಿದರು.