ನಾಪೆÇೀಕ್ಲು, ಮಾ. 17: ದಿ ತಾಮರ ಕೂರ್ಗ್ ವತಿಯಿಂದ ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಗೆ ರೂ. 40 ಸಾವಿರ ವೆಚ್ಚದ ಕಂಪ್ಯೂಟರ್ ಮತ್ತು ಪ್ರಿಂಟರನ್ನು ಕೊಡುಗೆಯಾಗಿ ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕೇಟೋಳಿರ ಪಿ. ಕುಟ್ಟಪ್ಪ ವಹಿಸಿದ್ದರು. ಈ ಸಂದರ್ಭ ಸಲಹೆಗಾರ ಪಾಲೆಕಂಡ ಕರುಂಬಯ್ಯ, ವ್ಯವಸ್ಥಾಪಕ ಕಲ್ಯಾಟಂಡ ಗಿರೀಶ್ ಸುಬ್ಬಯ್ಯ, ಪ್ಲಾಂಟೇಶನ್ ಮ್ಯಾನೇಜರ್ ದೀಪಕ್ ಎ.ಇ., ತಾಮರ ಕೂರ್ಗ್ನ ತಂತ್ರಜ್ಞಾನ ಮ್ಯಾನೇಜರ್ ರೊನ್ನಿ, ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಪಯ್ಯಡಿ ಹಂಸ, ಬಾತ್ಮೀದಾರ ಕಲ್ಯಾಟಂಡ ಸುಧಾ ಗಣಪತಿ, ಶಿಕ್ಷಕ ವೃಂದ, ಮತ್ತಿತರರು ಇದ್ದರು. ಮುಖ್ಯ ಶಿಕ್ಷಕ ಡಿ. ಅನಿಲ್ರಾಜ್ ಸ್ವಾಗತಿಸಿ, ವಂದಿಸಿದರು.