ಮಡಿಕೇರಿ, ಮಾ. 17: ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ವತಿಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಾ. 18 ರಂದು (ಇಂದು) ಬೆಳಗ್ಗೆ 11 ಗಂಟೆಗೆ ವೀರಾಜಪೇಟೆಯಲ್ಲಿ ವಿಶೇಷಚೇತನ ಮತದಾರರಿಂದ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳಿಂದ ತ್ರಿಚಕ್ರ ವಾಹನ ರ್ಯಾಲಿ ನಡೆಯಲಿದೆ.