ಮಡಿಕೇರಿ: ಟಾಟಾ ಕಾಫಿ ಸಂಸ್ಥೆಯು ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿತು. ಸಂಸ್ಥೆಯ ಎಲ್ಲ ಪುರುಷ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳಿಗೆ ಶುಭಾಷಯವನ್ನು ವಿಶಿಷ್ಟ ರೀತಿಯಲ್ಲಿ ಹಾರೈಸುವದರ ಮೂಲಕ ಮಹಿಳೆಯರ ಪ್ರಸಕ್ತ ದಿನಗಳಲ್ಲಿನ ಕಾರ್ಯಕ್ಷೇತ್ರದಲ್ಲಿನ ಸಾಧನೆಯನ್ನು ಶ್ಲಾಘನೆ ಮಾಡುತ್ತ ತಮ್ಮ ದೈನಂದಿನ ದಿನದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿ ಆಚರಿಸಲಾಯಿತು.
ಸಂಸ್ಥೆಯ ಸೀನಿಯರ್ ಜನರಲ್ ಮ್ಯಾನೆಜರ್ ಎಂ.ಬಿ. ಗಣಪತಿ ಅವರು ಮಹಿಳೆಯರು ತಮ್ಮ ಜೀವನದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿ ಕಾರ್ಯಕ್ಷೇತ್ರದಲ್ಲಿ ಅವರ ಪ್ರಗತಿಯನ್ನು ಉತ್ತುಂಗಕ್ಕ ಕೊಂಡೊಯ್ಯುವಂತೆ, ಹಾಗೂ ಮಹಿಳೆಯರ ಕಚೇರಿ ಹಾಗೂ ಗೃಹ ಕೃತ್ಯಗಳ ಬಗ್ಗೆ ಶ್ಲಾಘನೆ ಮಾಡಿ ಭವಿಷ್ಯದಲ್ಲಿ ಮತ್ತಷ್ಟು ಸಾಧನೆ ಮಾಡಲು ಹಾಗೂ ಸಂಸ್ಥೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಇದಕ್ಕೆ ಈಗಿರುವ ಪೂರಕ ವಾತಾವರಣ ಕಾಯ್ದುಕೊಳ್ಳುವಂತೆ ಕಿವಿಮಾತು ಹೇಳಿದರು. ನಂತರ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.