ಗೋಣಿಕೊಪ್ಪ ವರದಿ, ಮಾ. 16: ದೇವರಪುರ ಶ್ರೀ ಹೆಬ್ಬಾಲೆ ಅಯ್ಯಪ್ಪ ಭದ್ರಕಾಳಿ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಬಿಂಬ ಪ್ರತಿಷ್ಠಾಪನೆ ಕಾರ್ಯಕ್ರಮ ತಾ. 20 ರಿಂದ 3 ದಿನಗಳ ಕಾಲ ನಡೆಯಲಿದೆ.

ದೇವಸ್ಥಾನದ ಕಿರಾತೇಶ್ವರ ಹಾಗೂ ಭದ್ರಕಾಳಿ ಬಿಂಬಗಳು ದುಸ್ಥಿತಿಯಲ್ಲಿರುವದರಿಂದ ಜೀರ್ಣೋದ್ಧಾರ ಕಾರ್ಯ ನಡೆಸಲಾಗುತ್ತಿದೆ. ಮೂರು ದಿನ ಅನ್ನ ಸಂತರ್ಪಣೆ ಇದೆ. ತಾ. 20 ರಂದು ಸಂಜೆ 5 ಗಂಟೆಯಿಂದ ಸುಳ್ಯದ ಶ್ರೀ ವೇದವ್ಯಾಸ್ ತಂತ್ರಿಗಳ ತಂಡದಿಂದ ಪೂಜೆ ನಡೆಯಲಿದೆ. ಅಂದು ಸಂಜೆ 6.30 ಕ್ಕೆ ಸಾಮೂಹಿಕ ಪ್ರಾರ್ಥನೆ, ಪ್ರಸಾದ ಪರಿಗ್ರಹ ಸ್ವಸ್ತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ರಕ್ಷೇಘ್ನು ಹೋಮ, ವಾಸ್ತು ಬಲಿ, ಪ್ರಕಾರ ಬಲಿ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ತಾ. 21 ರಂದು ಬೆಳಿಗ್ಗೆ 6.30 ರಿಂದ ಗಣಪತಿ ಹೋಮ, ಬಿಂಬಶುದ್ಧಿ ಕಲಶ, ಪ್ರಾಯಶ್ಚಿತ ಹೋಮ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಬೆ. 9.47 ಕ್ಕೆ ನಾಗಪ್ರತಿಷ್ಠಾಪನೆ ಹಾಗೂ ಭಧ್ರಕಾಳಿ ಶಿಲಾ ಪ್ರತಿಷ್ಠೆ, ಸಂಜೆ 6 ರಿಂದ ಅನುಜ್ಞಾ ಪ್ರಾರ್ಥನೆ, ಅನುಜ್ಞಾನ ಕಲಶಾಭಿಷೇಕ, ಜೀವ ವಿದ್ವಾಹನೆ, ಶಯ್ಯಾ ಪೂಜೆ, ಜೀವ ಕಲಶ ಶಯ್ಯಾಗಮನ, ಪ್ರಸಾದ ವಿತರಣೆ ನಡೆಯಲಿದೆ.

ತಾ. 22 ರಂದು ಬೆ. 5 ರಿಂದ ಮಹಾಗಣಪತಿ ಹೋಮ, ಪೀಠ ಪ್ರತಿಷ್ಠೆ, ಬ್ರಹ್ಮ ಕಲಶ ಪೂಜೆ, 11.46 ಕ್ಕೆ ಕಿರಾತೇಶ್ವರ ದೇವರ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ನಿತ್ಯ ನೈಮಿತ್ಯ ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಹೆಬ್ಬಾಲೆ ಅಯ್ಯಪ್ಪ ಭದ್ರಕಾಳಿ ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಣ್ಣುವಂಡ ರಜನ್ ತಿಮ್ಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.