ಶನಿವಾರಸಂತೆ, ಮಾ. 16: ಪಟ್ಟಣದಲ್ಲಿ ಹೊಟೇಲೊಂದರ ಮುಂಭಾಗ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗೆ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಶಿವಕುಮಾರ್ ಹಾಗೂ ತಂಡದವರು ದಂಡ ವಿಧಿಸಿದ್ದಾರೆ.

ರಾಷ್ಟ್ರೀಯ ತಂಬಾಕು ನಿಯಂತ್ರಣ ಯೋಜನೆಯಡಿ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಟಾನ ಸಮರ್ಪಕವಾಗಿ ಆಗುತ್ತಿದೆಯೇ ಎಂಬ ಪರಿಶೀಲನೆಗಾಗಿ ಹಾಗೂ ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿರುವವರಿಗೆ ದಂಡ ವಿಧಿಸುವ ಉದ್ದೇಶದಿಂದ ತಂಡ ಭೇಟಿ ನೀಡಿತ್ತು.

ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ. ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ, ತಂಬಾಕು ತ್ಯಜಿಸುವದು ಹಾಗೂ ಅದರಿಂದ ಆಗುವ ಪ್ರಯೋಜನದ ಬಗ್ಗೆ ಡಾ. ಶಿವಕುಮಾರ್ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ಈ ಸಂದರ್ಭ ಕೀಟ ಶಾಸ್ತ್ರಜ್ಞ ಮಂಜುನಾಥ್, ತಾಲೂಕು ಆರೋಗ್ಯ ನಿರೀಕ್ಷಕ ಮಹೇಶ್, ಸಮಾಜ ಸೇವಕ ಮಂಜುನಾಥ್, ಸಲಹೆಗಾರರಾದ ಪುನೀತ ರಾಣಿ, ಸಿಬ್ಬಂದಿ ದೇವಪ್ಪ, ದೇವಯ್ಯ ಹಾಜರಿದ್ದರು.